ಮಂಗಳವಾರ, ಆಗಸ್ಟ್ 10, 2021

ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ?

 

ಪ್ರೀತಿ ಎಂದರೇನು ? ಹೃದಯ ಎಂದರೇನು? ಮನಸ್ಸು ಎಂದರೇನು? ಈ ಎಲ್ಲಾ ಪದದ ಅರ್ಥಗಳು ನಮಗೆ ತಿಳಿಯುವುದು ನೋವು ಎಂಬ ಭಾವನೆಯು ಅದರ ಅರ್ಥದ name board ಅನ್ನು ಕೈಯೆಲ್ಲೆ ಹಿಡಿದು ನೇರವಾಗಿ ನಮ್ಮ ಹೃದಯ ಸೇರಿದಾಗ. ನೋವು ಎಂದರೇನು? ನಮ್ಮ ಕೆಲವು ವರ್ಷಗಳವರೆಗೂ ನೋವು ಎಂದರೆ , ಬಿದ್ದಾಗ ಇಲ್ಲ ಯಾರಾದರು ನಮಗೆ ಹೊಡೆದಾಗ ನಮ್ಮ ದೇಹಕ್ಕೆ ಆಗುವ ಪರಿಣಾಮಗಳನ್ನು ನೋವು ಎಂದುಕೊಂಡಿರುತ್ತೇವೆ. ಆದರೆ ನಿಜವಾಗಲೂ ನೋವು ಎಂದರೆ ,ಯಾರಿಗೂ ತೋರಿಸಲಿಕ್ಕೂ ಆಗದೆ , ಹೇಳಲಿಕ್ಕೂ ಆಗದೆ , ಕೊನೆಯ ಪಕ್ಷ ಅಳುವುದಕ್ಕೂ ಆಗದೆ ಮೌನವಾಗಿ ಒಂದೆಡೆ ಕುಳಿತು ಕಷ್ಟ ಪಟ್ಟು ನಗು ಮುಖವನ್ನು ಧರಿಸಲು ಪ್ರಯತ್ನಿಸುವುದು.

ಎಲ್ಲಾ ನೋವುಗಳು ಕೇವಲ ಕ್ಷಣಿಕ ಮಾತ್ರ . ಈ ಬದುಕಿನ ದಾರಿಯುದಕ್ಕೂ ನಮಗೆ ಬರುವ ಹಲವು ನೋವುಗಳು ಬಂದಷ್ಟೇ ವೇಗವಾಗಿ ವಾಪಸ್ಸು ಹೊರಟು ಹೋಗುತ್ತವೆ. ಆದರೆ ಕೆಲವು ನೋವುಗಳು, ನಮ್ಮ ದೇಹದಲ್ಲಿರುವ ಉಸಿರು ನಮ್ಮ ದೇಹವನ್ನು ಬಿಟ್ಟು ಹೋದರು ಈ ನೋವು ಎಂಬ ಎರಡಕ್ಷರದ ಭಾವನೆ ಮಾತ್ರ ಈ ದೇಹವನ್ನು ಬಿಟ್ಟು ಹೋಗುವುದಿಲ್ಲ. ಅಲ್ಲಿಯವರೆಗೂ ನಮ್ಮನ್ನು ಪರಿ ಪರಿಯಾಗಿ ಕಾಡುತ್ತವೆ. ನಮ್ಮ ಬದುಕಿನುದ್ದಕ್ಕೂ ನಮ್ಮನ್ನು ಕಾಡುವ ಕೆಲವು ನೋವುಗಳಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವುದು ಕಳೆದುಕೊಂಡ ಪ್ರೀತಿ.

ಈ ಪ್ರೀತಿಯೆಂಬ ಒಂದು ಸುಂದರವಾದ ಭಾವನೆಯು ಯಾರ ಮನಸ್ಸಿನಲ್ಲಿ ಯಾವಾಗ ಹುಟ್ಟುತ್ತದೆ ಎಂದು ಹೇಳಲಿಕ್ಕೆ ದೇವರಿಗೂ ಸಾಧ್ಯವಾಗಿಲ್ಲ. ಅಂದಮೇಲೆ ನಾವು ಕೇವಲ ಮಾನವರು , ನಮಗೆ ಮಾತ್ರ ಹೇಳಲಿಕ್ಕೆ ಹೇಗೆ ಸಾಧ್ಯ? ಸಾಧ್ಯವಿಲ್ಲ. ಕಳೆದುಕೊಂಡ ಪ್ರೀತಿಯು ಕೊಡುವ ನೋವನ್ನು ತಾಳಲಾಗದೆ ಇದ್ದಾಗ ಪದೇ ಪದೇ ಮನಸ್ಸು ಒಂದು ಪ್ರಶ್ನೆಯನ್ನು ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳುತ್ತಿರುತ್ತದೆ , ಅದೇನೆಂದರೆ " ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ?". ಖಂಡಿತಾ ಅಪರಾಧವೇ , ಬರಬಾರದ ಹೊತ್ತಲ್ಲಿ , ಬರಬಾರದ ರೀತಿಯಲ್ಲಿ ,ಬರಬಾರದ ಪ್ರೀತಿಯು ನಮಗೆ ಅರಿವಿಲ್ಲದಂತೆಯೇ ನಮ್ಮ ಹೃದಯ ಹೊಕ್ಕಾಗ ಅದು ಖಂಡಿತಾ ಅಪರಾಧವೇ. ಬರುವಾಗ ನಮ್ಮ ಮನಸ್ಸಿಗೆ ಒಂದು ಕರೆಯನ್ನೆನಾದರೂ ಮಾಡಿದ್ದಿದ್ದರೆ ಖಂಡಿತಾ ಬರಬೇಡ ನಾನು ತುಂಬಾ ಸಂತೋಷವಾಗಿದ್ದೀನಿ ಎಂದು ಹೇಳಿಬಿಡಬಹುದಿತ್ತು. ಈಗ ಬಂದಿದ್ದು ಆಯಿತು , ನೋವನ್ನು ಕೊಟ್ಟಿದ್ದು ಆಯಿತು. ಇನ್ನೇನಿದ್ದರೂ ತೆಗೆದುಕೊಂಡ ಸಾಲಕ್ಕೆ ಬದುಕಿರುವವರೆಗೂ ಬಡ್ಡಿಯನ್ನು ಕಟ್ಟಲೇಬೇಕು. ಸಾಲ ತೀರಿಸುವ ಮಾತೆ ಇಲ್ಲ. ಇಷ್ಟಪಟ್ಟು ಜೀವನ ನಡೆಸುವುದಕ್ಕೆ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಬಹುದು, ಆದರೆ ನಮಗರಿವಿಲ್ಲದಂತೆಯೇ ಮಾಡಿಕೊಂಡ ಸಾಲಕ್ಕೆ ಬಡ್ಡಿ ಕಟ್ಟುವುದಕ್ಕೆ ಮನಸ್ಸು ಒಪ್ಪುತ್ತದಾ? ಖಂಡಿತಾ ಒಪ್ಪುವುದಿಲ್ಲ. ಒಂದೇ ಒಂದು ಅವಕಾಶ ಸಿಕ್ಕರೆ ಮತ್ತೆ ಹಿಂದೆ ಹೋಗಿ  ಈ ಪ್ರೀತಿ ಎಂಬ ಭಾವನೆಯು ಹೃದಯದಲ್ಲಿ ಹುಟ್ಟುವ ಘಳಿಗೆಯನ್ನು ತಡೆದು ನಿಲ್ಲಿಸಿ ,ಬೇರೆ ಯಾರದಾದರೂ ಖಾಲಿ ಇರುವ ಹೃದಯವನ್ನು ನೋಡಿಕೋ ಎಂದು ಕಪ್ಪಾಳಕ್ಕೆ ಹೊಡೆದು ಕಳಿಸಿಬಿಡಬಹುದ್ದಿತ್ತೇನೋ. ಆದರೆ ಅದು ಸಾಧ್ಯವಿಲ್ಲ. ಆ ದೇವರು ನಮ್ಮನ್ನು ಸೃಷ್ಟಿಸುವಾಗ ಎರಡು ಕೈ, ಎರಡು ಕಾಲು, ಎರಡು ಕಿವಿ, ಎರಡು ಕಿಡ್ನಿ, ಎಲ್ಲಾ ಎರಡೆರಡನ್ನು ಕೊಟ್ಟು ಈ ಹೃದಯವನ್ನು ಮಾತ್ರ ಒಂದೇ ಒಂದು ಕೊಟ್ಟುಬಿಟ್ಟ . ಎರಡು ಹೃದಯಗಳೇನಾದರೂ ಇದ್ದಿದರೆ ,ಈ ನೋವು ತುಂಬಿರುವ ಹೃದಯವನ್ನು ಕಿತ್ತೆಸೆದು ಖಾಲಿ ಇರುವ ಹೃದಯವನ್ನು ಯಾರ ಕಣ್ಣಿಗೂ ಬೀಳದ ಹಾಗೆ ,ಯಾವುದೇ ದೃಷ್ಟಿಯು ತಾಕದ ಹಾಗೆ, ಜೋಪಾನವಾಗಿ ಇಟ್ಟುಕೊಂಡು ನಗು ನಗುತ ಜೀವನ ನಡೆಸಬಹುದಿತ್ತು . ಆದರೆ ಹಾಗಾಗುವುದಿಲ್ಲ. ನಮಗಿರುವುದು ಒಂದೇ ಹೃದಯ. ಎರಡು ಹೃದಯಗಳನ್ನು ಕೊಡದ್ದಿದ್ದಕ್ಕೆ ದೇವರ ಮೇಲೆ ಒಮ್ಮೆ ಮುನಿಸಿಕೊಳ್ಳಬೇಕು ಎಂದನಿಸುತ್ತದೆ.

ಹೃದಯದಲ್ಲಿ ಪ್ರೀತಿ ಹುಟ್ಟಿದ ಮೇಲೆ ಎಷ್ಟೋ ಜನರ ಬದುಕು ಸುಂದರವಾಗಿರುತ್ತದೆ. ಸಿಕ್ಕರಷ್ಟೇ ಸುಂದರವಾಗಿರುತ್ತದೆ. ಇಲ್ಲದ್ದಿದರೆ ಮಟ ಮಟ ಮಧ್ಯಾಹ್ನ ಉರಿವ ಬಿಸಿಲಿನಲ್ಲಿಯೂ ಕತ್ತಲು ಆವರಿಸಿರುತ್ತದೆ. ಈ ಪ್ರೀತಿ ಎಂಬ ಭಾವನೆಯು ಹೇಳದೆ ಕೇಳದೆ ನಮ್ಮ ಹೃದಯದಲ್ಲಿರುವ ಜಾಗವನ್ನು ಒತ್ತುವರಿ ಮಾಡಿ ಆಕ್ರಮಿಸಿಕೊಂಡು ದೊಡ್ಡ ಅರಮನೆಯನ್ನೇ ಕಟ್ಟಿರುತ್ತದೆ . ಅದು ಮಾಡಿರುವ ಅಪರಾಧಕ್ಕೆ ಕೋರ್ಟಿನಲ್ಲಿ ಕೇಸು ಹಾಕೋಣವೆಂದರೆ ಯಾವ ಕೋರ್ಟಿನಲ್ಲಿಯೂ ಈ ಕೇಸು ನಿಲ್ಲುವುದಿಲ್ಲ . ಶಿಕ್ಷೆ ಯಾರಿಗೆ, ನಮಗೆ ತಾನೆ. ಯಾರೋ ಮಾಡಿದ ತಪ್ಪಿಗೆ ನಾವು ಅನುಭವಿಸಲೇ ಬೇಕು ಈ ಶಿಕ್ಷೆ. ಹೋಗುತ್ತಿರುವ ದಾರಿಯೇ ಮರೆತು ಹೋದ ಮೇಲೆ, ನಡು ರಸ್ತೆಯಲ್ಲಿ ಯಾರಾದರು ಸಿಕ್ಕಿ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದರೆ ಏನು ಹೇಳುವುದು . ವಾಪಸ್ಸು ಹೋಗುವ ಪ್ರಶ್ನೆಯೇ ಇಲ್ಲ. ದಾರಿ ಯಾವಾಗಲು ಮುಂದೆ ಇರುತ್ತದೆ ,ಹಿಂದೆ ಇರುವುದಿಲ್ಲ. ನಡೆಯಬೇಕಿರುವುದು ಮುಂದಕ್ಕೆ ,ಹಿಂದಕ್ಕಲ್ಲ. ನಡೆಯುತ್ತಿರುವ ದಾರಿಯು ಮುಗಿಯುವವರೆಗೂ ನಡೆಯಲೇಬೇಕು. ಎದುರಿಗೆ ಸಿಕ್ಕವರಿಗೆ ಉತ್ತರ ಕೊಡಲೇಬೇಕು. ದಾರಿಯಲ್ಲಿ ನಡೆಯುತ್ತಿರುವಾಗ ಮತ್ತದೇ ಉತ್ತರ ಸಿಗದ ಪ್ರಶ್ನೆ ಕಾಡುತ್ತಿರುತ್ತದೆ , ಅದೇನೆಂದರೆ  "  ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ ?".
ಪ್ರೀತಿ ಪಡೆದುಕೊಂಡವರಿಗೆ ಹೃದಯದಲ್ಲಿ ಪ್ರೀತಿ ಹುಟ್ಟೋದು ಎಂದೂ ಅಪರಾಧವಲ್ಲ. ಕಳೆದುಕೊಂಡವರಿಗಷ್ಟೇ ಖಂಡಿತಾ ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ.

ಅಪರಾಧ ಮಾಡಿರುವುದು ಪ್ರೀತಿಯೆಯಾದರು ಶಿಕ್ಷೆ ಅನುಭವಿಸುತ್ತಿರುವ ನಿರಪರಾಧಿಗಳು ನಾವು.

(ಇದು ಕೇವಲ ಕಾಲ್ಪನಿಕ ಬರಹ ).

ಪ್ರೀತಿಸಿದವಳನ್ನು ಮರೆಯುವುದು ಹೇಗೆ?

ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ...