ಗುರುವಾರ, ಆಗಸ್ಟ್ 5, 2021

ಕಾಡಿನ ನಡುವಿನ ರೈಲು ಹಳಿ

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>

ಟ್ಟವಾದ ಕಾಡು ,ಕಾಡಿನ ಮಧ್ಯದಲ್ಲಿ ಎರಡು ರೈಲಿನ ಹಳಿಗಳು. ಎಂದೂ ಸೇರದ ಇಬ್ಬರು ಪ್ರೇಮಿಗಳು ಕೈಗಳನ್ನು ಹಿಡಿಯದೇ ,ದೂರದ ಊರಿಗೆ ಹೊರಟಿರುವಂತಿರುತ್ತದೆ . ಯಾರದೋ ಬರುವಿಕೆಗಾಗಿ ಹೆದರಿ ಅವಿತುಕೊಂಡಿದ್ದವು ಹಕ್ಕಿಗಳು. ರೈಲಿನ ಶಬ್ದಕ್ಕೆ ಹೆದರಿ ಶಬ್ದ ಮಾಡುವುದನ್ನೇ ಬಿಟ್ಟಿದವು. ಎರಡೂ ರೈಲು ಹಳಿಗಳು ಎರಡೂ ಜೀವಗಳಂತೆ. ಒಂದು ಗಂಡು ಜೀವ, ಇನ್ನೊಂದು ಹೆಣ್ಣು ಜೀವ. ಈ ಎರಡೂ ಹಳಿಗಳು ನಿಜವಾಗಿ ಪ್ರೀತಿ ಮಾಡಿ ದೂರವಾದ ಇಬ್ಬರು ಪ್ರೇಮಿಗಳಂತೆ . ಇವೆರಡರ ಮೇಲೆ ಬದುಕೆಂಬ ರೈಲು ಯಾವಾಗಲು ಚಲಿಸುತ್ತಿರುತ್ತದೆ. ಆದರೆ ಪ್ರೇಮಿಗಳೆಂಬ ಈ ಎರಡು ಹಳಿಗಳು ಎಂದಿಗೂ ಸೇರಲಾಗುವುದಿಲ್ಲ . ಆದರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲಿಕ್ಕಾಗುವುದಿಲ್ಲ. ಹಾಗೇನಾದರೂ ಒಂದನ್ನು ಬಿಟ್ಟು ಇನ್ನೊಂದು ಬದುಕಲು ಪ್ರಯತ್ನಿಸಿದರೆ , ಈ ಬದುಕೆಂಬ ರೈಲಿನ ಪಯಣವು ದಾರಿ ತಪ್ಪಿ ಯಮಲೋಕಕ್ಕೆ ನೇರವಾಗಿ ಹೋಗಬೇಕಾಗುತ್ತದೆ . ಜೊತೆಯಲ್ಲೇ ಇದ್ದರು ಇಲ್ಲದಂತೆ ಮೌನವಾಗಿ ಬದುಕೆಂಬ ರೈಲಿನೊಟ್ಟಿಗೆ ಚಲಿಸುವುದೊಂದೇ ದಾರಿ . ಈ ಬದುಕೆಂಬ ರೈಲು ಕೆಲವೊಮ್ಮೆ ರೈಲಿನ ಹಳಿಗಳ ಮೇಲೆ ಎಲ್ಲೆಂದರಲ್ಲಿ ನಿಂತೇ ಹೋಗುತ್ತದೆ. ಕಾರಣಗಳು ಸಾವಿರ ಇರಬಹುದು. ಈ ಎರಡು ಹಳಿಗಳು ನಿಂತುಹೋದ ಬದುಕೆಂಬ ರೈಲಿನ ಭಾರವನ್ನು ತಾಳಲಾರದೆ ಒಬ್ಬರೊನೊಬ್ಬರು ಮಾತನಾಡದೆ ಸಮಾಧಾನಪಡಿಸಿಕೊಂಡು , ಬರಿ ಕಣ್ಣುಗಳ್ಳಲೇ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸುತ್ತ ಈ ಬದುಕು ಇರುವವರೆಗೂ ಕಾಡಿನ ನಡುವಿನ ರೈಲು ಹಳಿಗಳು ಕೊರಗಿ ಕೊರಗಿ ಬದುಕುತ್ತಿರುತ್ತವೆ .


ಪ್ರೀತಿಸಿದವಳನ್ನು ಮರೆಯುವುದು ಹೇಗೆ?

ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ...