ಮಂಗಳವಾರ, ಆಗಸ್ಟ್ 10, 2021

ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ?

 

ಪ್ರೀತಿ ಎಂದರೇನು ? ಹೃದಯ ಎಂದರೇನು? ಮನಸ್ಸು ಎಂದರೇನು? ಈ ಎಲ್ಲಾ ಪದದ ಅರ್ಥಗಳು ನಮಗೆ ತಿಳಿಯುವುದು ನೋವು ಎಂಬ ಭಾವನೆಯು ಅದರ ಅರ್ಥದ name board ಅನ್ನು ಕೈಯೆಲ್ಲೆ ಹಿಡಿದು ನೇರವಾಗಿ ನಮ್ಮ ಹೃದಯ ಸೇರಿದಾಗ. ನೋವು ಎಂದರೇನು? ನಮ್ಮ ಕೆಲವು ವರ್ಷಗಳವರೆಗೂ ನೋವು ಎಂದರೆ , ಬಿದ್ದಾಗ ಇಲ್ಲ ಯಾರಾದರು ನಮಗೆ ಹೊಡೆದಾಗ ನಮ್ಮ ದೇಹಕ್ಕೆ ಆಗುವ ಪರಿಣಾಮಗಳನ್ನು ನೋವು ಎಂದುಕೊಂಡಿರುತ್ತೇವೆ. ಆದರೆ ನಿಜವಾಗಲೂ ನೋವು ಎಂದರೆ ,ಯಾರಿಗೂ ತೋರಿಸಲಿಕ್ಕೂ ಆಗದೆ , ಹೇಳಲಿಕ್ಕೂ ಆಗದೆ , ಕೊನೆಯ ಪಕ್ಷ ಅಳುವುದಕ್ಕೂ ಆಗದೆ ಮೌನವಾಗಿ ಒಂದೆಡೆ ಕುಳಿತು ಕಷ್ಟ ಪಟ್ಟು ನಗು ಮುಖವನ್ನು ಧರಿಸಲು ಪ್ರಯತ್ನಿಸುವುದು.

ಎಲ್ಲಾ ನೋವುಗಳು ಕೇವಲ ಕ್ಷಣಿಕ ಮಾತ್ರ . ಈ ಬದುಕಿನ ದಾರಿಯುದಕ್ಕೂ ನಮಗೆ ಬರುವ ಹಲವು ನೋವುಗಳು ಬಂದಷ್ಟೇ ವೇಗವಾಗಿ ವಾಪಸ್ಸು ಹೊರಟು ಹೋಗುತ್ತವೆ. ಆದರೆ ಕೆಲವು ನೋವುಗಳು, ನಮ್ಮ ದೇಹದಲ್ಲಿರುವ ಉಸಿರು ನಮ್ಮ ದೇಹವನ್ನು ಬಿಟ್ಟು ಹೋದರು ಈ ನೋವು ಎಂಬ ಎರಡಕ್ಷರದ ಭಾವನೆ ಮಾತ್ರ ಈ ದೇಹವನ್ನು ಬಿಟ್ಟು ಹೋಗುವುದಿಲ್ಲ. ಅಲ್ಲಿಯವರೆಗೂ ನಮ್ಮನ್ನು ಪರಿ ಪರಿಯಾಗಿ ಕಾಡುತ್ತವೆ. ನಮ್ಮ ಬದುಕಿನುದ್ದಕ್ಕೂ ನಮ್ಮನ್ನು ಕಾಡುವ ಕೆಲವು ನೋವುಗಳಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವುದು ಕಳೆದುಕೊಂಡ ಪ್ರೀತಿ.

ಈ ಪ್ರೀತಿಯೆಂಬ ಒಂದು ಸುಂದರವಾದ ಭಾವನೆಯು ಯಾರ ಮನಸ್ಸಿನಲ್ಲಿ ಯಾವಾಗ ಹುಟ್ಟುತ್ತದೆ ಎಂದು ಹೇಳಲಿಕ್ಕೆ ದೇವರಿಗೂ ಸಾಧ್ಯವಾಗಿಲ್ಲ. ಅಂದಮೇಲೆ ನಾವು ಕೇವಲ ಮಾನವರು , ನಮಗೆ ಮಾತ್ರ ಹೇಳಲಿಕ್ಕೆ ಹೇಗೆ ಸಾಧ್ಯ? ಸಾಧ್ಯವಿಲ್ಲ. ಕಳೆದುಕೊಂಡ ಪ್ರೀತಿಯು ಕೊಡುವ ನೋವನ್ನು ತಾಳಲಾಗದೆ ಇದ್ದಾಗ ಪದೇ ಪದೇ ಮನಸ್ಸು ಒಂದು ಪ್ರಶ್ನೆಯನ್ನು ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳುತ್ತಿರುತ್ತದೆ , ಅದೇನೆಂದರೆ " ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ?". ಖಂಡಿತಾ ಅಪರಾಧವೇ , ಬರಬಾರದ ಹೊತ್ತಲ್ಲಿ , ಬರಬಾರದ ರೀತಿಯಲ್ಲಿ ,ಬರಬಾರದ ಪ್ರೀತಿಯು ನಮಗೆ ಅರಿವಿಲ್ಲದಂತೆಯೇ ನಮ್ಮ ಹೃದಯ ಹೊಕ್ಕಾಗ ಅದು ಖಂಡಿತಾ ಅಪರಾಧವೇ. ಬರುವಾಗ ನಮ್ಮ ಮನಸ್ಸಿಗೆ ಒಂದು ಕರೆಯನ್ನೆನಾದರೂ ಮಾಡಿದ್ದಿದ್ದರೆ ಖಂಡಿತಾ ಬರಬೇಡ ನಾನು ತುಂಬಾ ಸಂತೋಷವಾಗಿದ್ದೀನಿ ಎಂದು ಹೇಳಿಬಿಡಬಹುದಿತ್ತು. ಈಗ ಬಂದಿದ್ದು ಆಯಿತು , ನೋವನ್ನು ಕೊಟ್ಟಿದ್ದು ಆಯಿತು. ಇನ್ನೇನಿದ್ದರೂ ತೆಗೆದುಕೊಂಡ ಸಾಲಕ್ಕೆ ಬದುಕಿರುವವರೆಗೂ ಬಡ್ಡಿಯನ್ನು ಕಟ್ಟಲೇಬೇಕು. ಸಾಲ ತೀರಿಸುವ ಮಾತೆ ಇಲ್ಲ. ಇಷ್ಟಪಟ್ಟು ಜೀವನ ನಡೆಸುವುದಕ್ಕೆ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಬಹುದು, ಆದರೆ ನಮಗರಿವಿಲ್ಲದಂತೆಯೇ ಮಾಡಿಕೊಂಡ ಸಾಲಕ್ಕೆ ಬಡ್ಡಿ ಕಟ್ಟುವುದಕ್ಕೆ ಮನಸ್ಸು ಒಪ್ಪುತ್ತದಾ? ಖಂಡಿತಾ ಒಪ್ಪುವುದಿಲ್ಲ. ಒಂದೇ ಒಂದು ಅವಕಾಶ ಸಿಕ್ಕರೆ ಮತ್ತೆ ಹಿಂದೆ ಹೋಗಿ  ಈ ಪ್ರೀತಿ ಎಂಬ ಭಾವನೆಯು ಹೃದಯದಲ್ಲಿ ಹುಟ್ಟುವ ಘಳಿಗೆಯನ್ನು ತಡೆದು ನಿಲ್ಲಿಸಿ ,ಬೇರೆ ಯಾರದಾದರೂ ಖಾಲಿ ಇರುವ ಹೃದಯವನ್ನು ನೋಡಿಕೋ ಎಂದು ಕಪ್ಪಾಳಕ್ಕೆ ಹೊಡೆದು ಕಳಿಸಿಬಿಡಬಹುದ್ದಿತ್ತೇನೋ. ಆದರೆ ಅದು ಸಾಧ್ಯವಿಲ್ಲ. ಆ ದೇವರು ನಮ್ಮನ್ನು ಸೃಷ್ಟಿಸುವಾಗ ಎರಡು ಕೈ, ಎರಡು ಕಾಲು, ಎರಡು ಕಿವಿ, ಎರಡು ಕಿಡ್ನಿ, ಎಲ್ಲಾ ಎರಡೆರಡನ್ನು ಕೊಟ್ಟು ಈ ಹೃದಯವನ್ನು ಮಾತ್ರ ಒಂದೇ ಒಂದು ಕೊಟ್ಟುಬಿಟ್ಟ . ಎರಡು ಹೃದಯಗಳೇನಾದರೂ ಇದ್ದಿದರೆ ,ಈ ನೋವು ತುಂಬಿರುವ ಹೃದಯವನ್ನು ಕಿತ್ತೆಸೆದು ಖಾಲಿ ಇರುವ ಹೃದಯವನ್ನು ಯಾರ ಕಣ್ಣಿಗೂ ಬೀಳದ ಹಾಗೆ ,ಯಾವುದೇ ದೃಷ್ಟಿಯು ತಾಕದ ಹಾಗೆ, ಜೋಪಾನವಾಗಿ ಇಟ್ಟುಕೊಂಡು ನಗು ನಗುತ ಜೀವನ ನಡೆಸಬಹುದಿತ್ತು . ಆದರೆ ಹಾಗಾಗುವುದಿಲ್ಲ. ನಮಗಿರುವುದು ಒಂದೇ ಹೃದಯ. ಎರಡು ಹೃದಯಗಳನ್ನು ಕೊಡದ್ದಿದ್ದಕ್ಕೆ ದೇವರ ಮೇಲೆ ಒಮ್ಮೆ ಮುನಿಸಿಕೊಳ್ಳಬೇಕು ಎಂದನಿಸುತ್ತದೆ.

ಹೃದಯದಲ್ಲಿ ಪ್ರೀತಿ ಹುಟ್ಟಿದ ಮೇಲೆ ಎಷ್ಟೋ ಜನರ ಬದುಕು ಸುಂದರವಾಗಿರುತ್ತದೆ. ಸಿಕ್ಕರಷ್ಟೇ ಸುಂದರವಾಗಿರುತ್ತದೆ. ಇಲ್ಲದ್ದಿದರೆ ಮಟ ಮಟ ಮಧ್ಯಾಹ್ನ ಉರಿವ ಬಿಸಿಲಿನಲ್ಲಿಯೂ ಕತ್ತಲು ಆವರಿಸಿರುತ್ತದೆ. ಈ ಪ್ರೀತಿ ಎಂಬ ಭಾವನೆಯು ಹೇಳದೆ ಕೇಳದೆ ನಮ್ಮ ಹೃದಯದಲ್ಲಿರುವ ಜಾಗವನ್ನು ಒತ್ತುವರಿ ಮಾಡಿ ಆಕ್ರಮಿಸಿಕೊಂಡು ದೊಡ್ಡ ಅರಮನೆಯನ್ನೇ ಕಟ್ಟಿರುತ್ತದೆ . ಅದು ಮಾಡಿರುವ ಅಪರಾಧಕ್ಕೆ ಕೋರ್ಟಿನಲ್ಲಿ ಕೇಸು ಹಾಕೋಣವೆಂದರೆ ಯಾವ ಕೋರ್ಟಿನಲ್ಲಿಯೂ ಈ ಕೇಸು ನಿಲ್ಲುವುದಿಲ್ಲ . ಶಿಕ್ಷೆ ಯಾರಿಗೆ, ನಮಗೆ ತಾನೆ. ಯಾರೋ ಮಾಡಿದ ತಪ್ಪಿಗೆ ನಾವು ಅನುಭವಿಸಲೇ ಬೇಕು ಈ ಶಿಕ್ಷೆ. ಹೋಗುತ್ತಿರುವ ದಾರಿಯೇ ಮರೆತು ಹೋದ ಮೇಲೆ, ನಡು ರಸ್ತೆಯಲ್ಲಿ ಯಾರಾದರು ಸಿಕ್ಕಿ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದರೆ ಏನು ಹೇಳುವುದು . ವಾಪಸ್ಸು ಹೋಗುವ ಪ್ರಶ್ನೆಯೇ ಇಲ್ಲ. ದಾರಿ ಯಾವಾಗಲು ಮುಂದೆ ಇರುತ್ತದೆ ,ಹಿಂದೆ ಇರುವುದಿಲ್ಲ. ನಡೆಯಬೇಕಿರುವುದು ಮುಂದಕ್ಕೆ ,ಹಿಂದಕ್ಕಲ್ಲ. ನಡೆಯುತ್ತಿರುವ ದಾರಿಯು ಮುಗಿಯುವವರೆಗೂ ನಡೆಯಲೇಬೇಕು. ಎದುರಿಗೆ ಸಿಕ್ಕವರಿಗೆ ಉತ್ತರ ಕೊಡಲೇಬೇಕು. ದಾರಿಯಲ್ಲಿ ನಡೆಯುತ್ತಿರುವಾಗ ಮತ್ತದೇ ಉತ್ತರ ಸಿಗದ ಪ್ರಶ್ನೆ ಕಾಡುತ್ತಿರುತ್ತದೆ , ಅದೇನೆಂದರೆ  "  ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ ?".
ಪ್ರೀತಿ ಪಡೆದುಕೊಂಡವರಿಗೆ ಹೃದಯದಲ್ಲಿ ಪ್ರೀತಿ ಹುಟ್ಟೋದು ಎಂದೂ ಅಪರಾಧವಲ್ಲ. ಕಳೆದುಕೊಂಡವರಿಗಷ್ಟೇ ಖಂಡಿತಾ ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ.

ಅಪರಾಧ ಮಾಡಿರುವುದು ಪ್ರೀತಿಯೆಯಾದರು ಶಿಕ್ಷೆ ಅನುಭವಿಸುತ್ತಿರುವ ನಿರಪರಾಧಿಗಳು ನಾವು.

(ಇದು ಕೇವಲ ಕಾಲ್ಪನಿಕ ಬರಹ ).

ಸೋಮವಾರ, ಆಗಸ್ಟ್ 9, 2021

ಹೆಣ್ಣು...


ಮಗುವಾಗಿ ಹುಟ್ಟಿದ ಕ್ಷಣದಿಂದಲೇ ಶುರುವಾಗುತ್ತದೆ ಈ ಕದನ. ಯಾವ ಮಗು ಹುಟ್ಟುತ್ತದೆ ಗಂಡು ಮಗುವೋ? ಅಥವಾ ಹೆಣ್ಣು ಮಗುವೋ ?. ದೇವರೇ ಮೊದಲನೆಯ ಮಗು ನನಗೆ ಗಂಡಾಗಲಿ ಎಂದು ಪ್ರಾರ್ಥಿಸುವ ಸಾವಿರಾರು ಕೈಗಳು , ಹೆಣ್ಣಾಗದಿರಲಿ ಎಂದು ಪ್ರಾರ್ಥಿಸುವ ಲಕ್ಷಾಂತರ ಕೈಗಳು. ಹುಟ್ಟಿದ ಕ್ಷಣ ಮಾತ್ರದಲ್ಲೇ ಆ ಹೆಣ್ಣು ಮಗು ಯಾರಿಗೂ ಬೇಡವಾಗುತ್ತದೆ. ಈ ಬದುಕು ಎಸೆವ ಸವಾಲುಗಳನ್ನು ಅಂದಿನಿಂದಲೇ ಎದುರಿಸಲು ಸಿದ್ಧವಾಗುತ್ತವೆ. ಒಂದು ಹೆಣ್ಣು ಹುಟ್ಟಿದ ಕ್ಷಣದಿಂದಲೇ ಅದು ಬೇರೆಯವರ ಮನೆಗೆ ಹೋಗುವ ಮಗು ಎಂದು ಆಗಲೇ ನಿರ್ದರಿಸಿಬಿಟ್ಟಿರುತ್ತಾರೆ . ಈ ಹೆಣ್ಣು ಮಕ್ಕಳಿಗೆ ಶಾಪವೆಂದರೆ ಅವರು ಯಾವ ಮನೆಯಲ್ಲಿ ಹುಟ್ಟಿರುತ್ತಾರೋ ಪಾಪ ಆ ಮನೆಯಲ್ಲೇ ಅವರಿಗೆ ಜಾಗ ಇರುವುದಿಲ್ಲ. ಅವರು ಹುಟ್ಟಿದ ಮನೆಯನ್ನು ಮುಂದೊಂದು ದಿನ ಬಿಡಲೇಬೇಕಾಗುತ್ತದೆ. ಈ ಪ್ರಕೃತಿಯಲ್ಲಿ ಸುಂದರವಾಗಿರುವುದೆಲವನ್ನು ಹೆಣ್ಣಿಗೆ ಹೋಲಿಸುತ್ತಾರೆ. ತಂದೆ ತಾಯಿಗೆ ತಕ್ಕ ಮಗಳಾಗಿ ,ಬಂದುವಾಗಿ, ಸ್ನೇಹಿತೆಯಾಗಿ, ಪ್ರೀತಿಯ ಗೆಳೆಯನಿಗೆ ಪ್ರೀತಿಯ ಗೆಳತಿಯಾಗಿ ,ಹೆಂಡತಿಯಾಗಿ ಸೊಸೆಯಾಗಿ, ಮಕ್ಕಳಿಗೆ ಅಮ್ಮನಾಗಿ, ಅತ್ತೆಯಾಗಿ, ಮೊಮೊಕ್ಕಳಿಗೆ ಅಜ್ಜಿಯಾಗಿ,ಸದಾ ಎಲ್ಲರಿಗೂ ಒಳಿತನ್ನು ಬಯಸುವ ಮುಗ್ದ ಮನಸ್ಸಾಗಿ ಬದುಕು ಸವೆದಿರುತ್ತದೆ.
ಪ್ರೀತಿ ,ಕರುಣೆ, ತಾಳ್ಮೆ ,ಸಹನೆ, ನಗು, ಕಣ್ಣೀರು, ನಾಗರ ಹಾವಿನ ಜಡೆ, ಇವೆಲ್ಲದರ ಸಮಾನಾರ್ಥಕ ಪದವೇ ಹೆಣ್ಣು. ಪ್ರತಿಯೊಬ್ಬ ಗಂಡಸಿನ inspiration ,confidence ಎಲ್ಲವೂ ಹೆಣ್ಣು.

ಒಂದು ಹೆಣ್ಣಿನ ಮನಸ್ಸು ಇನ್ನೂ ಮಾತು ಬಾರದ ಪ್ರಶಾಂತವಾದ ಪುಟ್ಟ ಮಗುವಿನ ಹೃದಯವಿದಂತೆ . ಗಂಡು ಹುಟ್ಟಿದರೆ ಹುಟ್ಟಿದ ಮನೆಯನ್ನು ಮಾತ್ರ ಬೆಳಗುತ್ತಾನೆ . ಅದೇ ಒಂದು ಹೆಣ್ಣು ಹುಟ್ಟಿದರೆ, ಹುಟ್ಟಿದ ಮನೆಗೂ ಕೊಟ್ಟ ಮನೆಗೂ , ಎರಡು ಮನೆಯ ಜ್ಯೋತಿಯಾಗಿ ಉರಿಯುತ್ತಾಳೆ. ಅವಳು ಎಲ್ಲೇ ಇದ್ದರು ಹೇಗೆ ಇದ್ದರು ಎಂದಿಗೂ ತನ್ನ ತವರು ಮನೆಯನ್ನು ಮರೆಯುವುದಿಲ್ಲ. ಒಂದು ಹೆಣ್ಣು ನಿಜವಾಗಿಯೂ ಖುಷಿಯಾಗಿದ್ದಾಳೆ ಎಂದರೆ ಅವಳ ತವರು ಮನೆಯು ಸಂತೋಷವಾಗಿದೆ ಎಂದರ್ಥ. ಇದರ ಬೆಲೆ ತಿಳಿಯದೆ, ಹುಟ್ಟಿದಾಗಿನಿಂದಲೇ, ಇನ್ನೊಂದು ಮನೆಯ ಹೆಣ್ಣವಳು ಎಂದು ನಿಂದಿಸುತ್ತಾರೆ ,ನೋಯಿಸುತ್ತಾರೆ . ತುಟಿ ಅಂಚಿನಲ್ಲಿನ ಸಣ್ಣನೆಯ ಮೃದುವಾದ ಮಲ್ಲಿಗೆ ಹೂವಿನ ಪರಿಮಳವ ಬೀರುವ ಸುಂದರವಾದ ನಗುವೊಂದಿದ್ದರೆ ಸಾಕು ಪ್ರಪಂಚವನ್ನೇ ಗೆಲ್ಲುವ ಶಕ್ತಿ ಇರುತ್ತದೆ ಅವಳಿಗೆ. ಯಾರವಳು? ಹೆಣ್ಣಲ್ಲವೇ, ತಾಯಲ್ಲವೇ , ನಮ್ಮ ಬದುಕಿನ ಬೆಳಕಲ್ಲವೇ, ನೋವಲ್ಲವೇ , ನಲಿವಲ್ಲವೇ, ಜೀವನದ ಬಗೆಗೆ ಅರಿತವಳು ಅವಳೇ ಅಲ್ಲವೇ? ಕೊನೆಗೆ ನಮಗೆ ನೆರಳಾಗುವವಳು ಅವಳೇ ಅಲ್ಲವೇ. ಮತ್ತೇಕೆ ಬೇರೆಯವರ ಮನೆಯವಳು ಎಂದು ನಿಂದಿಸುತ್ತೀರಾ ? ಅವಳು ಒಮ್ಮೆ ಆಕಾಶದ ಕಡೆ ಮುಖ ಮಾಡಿ ಸಣ್ಣನೆಯ ಕಿರುನಗೆಯನ್ನು ಮೋಡದೆಡೆಗೆ ಬೀರಿದರೆ ಸಾಕು, ಅದೆಷ್ಟೋ ವರುಷಗಳ ಕಾಲ ಭೂಮಿಯ ಮೇಲೆ ಮುನಿಸಿಕೊಂಡಿದ್ದ ಮೋಡಗಳು ಮಳೆಯಾಗಿ ,ಅವಳ ಸುಂದರವಾದ ಮೊಗವನೊಮ್ಮೆ ನೋಡಲು ಭೂಮಿಗೆ ಬಂದೆ ಬಿಡುತ್ತವೆ. ಹೆಣ್ಣು ಶಕ್ತಿಯೆಲ್ಲವೇ , ಯುಕ್ತಿಯೆಲ್ಲವೇ, ನಮ್ಮ ಬಾಳ ಜ್ಯೋತಿಯನ್ನು ಬೆಳಗುವ ದೀಪವಲ್ಲವೇ. ಹೆಣ್ಣೆಂದರೆ ಹೇಗಿರಬೇಕು? ಸಂಸಾರದ ನೊಗಕ್ಕೆ ಹೆಗಲಾಗಿ, ಕಷ್ಟಗಳನ್ನು ಮೆಟ್ಟಿ ನಿಲ್ಲುವ ದೈರ್ಯಶಾಲಿಯಾಗಿ, ನಾಡಿನ ,ಮನೆಯ ಹೆಮ್ಮೆಯ ಮಗಳಾಗಿರಬೇಕು. ಎಲ್ಲರಿಗೂ ನೋವುಗಳು ಇರುತ್ತವೆ. ಆದರೆ ಅದನ್ನು ತೋರಿಸುವ, ವ್ಯಕ್ತಪಡಿಸುವ ವಿಧಾನಗಳು ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಎಷ್ಟೋ ನೋವುಗಳು ಕಣ್ಣೀರಾಗಿರುತ್ತವೆ. ಆದರೆ ಒಂದು ಹೆಣ್ಣಿನ ನೋವು, ಮೌನವಾಗಿ, ಕಣ್ಣಿನ ನೀರಿನ ಹನಿಗಳನ್ನು ನೆಲಕ್ಕೆ ಚೆಲ್ಲದೆ, ಕಣ್ಣಿನಲ್ಲಿಯೇ ಹಿಡಿದಿಟ್ಟುಕೊಂಡು , ಯಾರಿಗೂ ಕಾಣದ ಹಾಗೆ, ಮರೆಯಲ್ಲಿ ನಿಂತು ಮೆಲ್ಲಗೆ ಕಣ್ಣೀರಾಗಿ, ಗೊತ್ತಿಲ್ಲದವರ ಮುಂದೆ ನಗುವಾಗಿರುತ್ತಾಳೆ.

ಹೆಣ್ಣು ಮಗುವಿನ ಜನನವೆಂದರೆ, ಮಗುವಿನ ತಂದೆ ಮುಖವನ್ನು ಗಂಟುಹಾಕಿಕೊಳ್ಳುವ ಕಾಲವೊಂದಿತ್ತು. ಆದರೆ ಮೂರ್ಖ ತಂದೆಗೆ ಗೊತ್ತಿರುವುದಿಲ್ಲ ಪ್ರತಿಯೊಬ್ಬ ತಂದೆಗೂ ಆಸರೆಯಾಗಿರುವುದು ತನ್ನ ಮಗಳೇ ಎಂದು. ಒಂದು ಕಾಲದಲ್ಲಿ ಪುರುಷರಿಗಷ್ಟೇ ಸೀಮಿತವಾಗಿದ್ದ ಅದೆಷ್ಟೋ ವ್ಯವಹಾರಗಳನ್ನು ಇಂದು ಹೆಣ್ಣು ಸುಲಲಿತವಾಗಿ ನಡೆಸಿಕೊಂಡು ಹೋಗುತ್ತಾಳೆ. ಈ ಆಧುನಿಕ ಸಮಾಜದ ಕೆಲವೊಂದು ಕಡೆ ಗಂಡು ,ಹೆಣ್ಣು ಎಂಬ ಕೆಲವು ಭೇದಗಳನ್ನು ತೊಡೆದು ಹಾಕಿರುವುದನ್ನು ಗಮನಿಸಬಹುದು. ಆದರೆ ಇನ್ನೂ ಕೆಲವೆಡೆ ಗಂಡು ,ಹೆಣ್ಣು ಎಂಬ ಭೇದ ಭಾವವು ಈಗಲೂ ಇರುವುದನ್ನು ಕಾಣಬಹುದು. ಒಂದು ಹೆಣ್ಣು ಕೋಪದಿಂದ ಕಣ್ಣು ಬಿಟ್ಟರೆ ಪ್ರಳಯವಾದರೂ ಆಗಬಹುದು . ಅದೇ ಹೆಣ್ಣು ಪ್ರೀತಿಯಿಂದ ಕಣ್ಣು ಬಿಟ್ಟರೆ ಒಡೆದು ಚೂರು ಚೂರಾಗಿದ್ದ ಹೃದಯವೂ ಕೂಡ ತನ್ನ ಎದೆ ಬಡಿತವನ್ನು  ಮುಂದುವರಿಸುವ ಶಕ್ತಿ ಅದಕ್ಕಿರುತ್ತದೆ. ಎಂತಹ ಕ್ರೂರಿಯ ಮನಸಿನಲ್ಲಿಯೂ ಪ್ರೀತಿಯನ್ನು ಹುಟ್ಟಿಸುವ ಶಕ್ತಿ ಹೆಣ್ಣಿಗಲ್ಲದೆ ಮತ್ಯಾರಿಗಿರುತ್ತದೆ.

ಅವಳೆಂದರೆ ಏನ್ನೇನಲಿ, ಅವಳೇ ಒಂದು ಶಕ್ತಿ . ಅವಳೇ ಆ ಹೆಣ್ಣು.....................

ಗುರುವಾರ, ಆಗಸ್ಟ್ 5, 2021

ಕಾಡಿನ ನಡುವಿನ ರೈಲು ಹಳಿ

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>

ಟ್ಟವಾದ ಕಾಡು ,ಕಾಡಿನ ಮಧ್ಯದಲ್ಲಿ ಎರಡು ರೈಲಿನ ಹಳಿಗಳು. ಎಂದೂ ಸೇರದ ಇಬ್ಬರು ಪ್ರೇಮಿಗಳು ಕೈಗಳನ್ನು ಹಿಡಿಯದೇ ,ದೂರದ ಊರಿಗೆ ಹೊರಟಿರುವಂತಿರುತ್ತದೆ . ಯಾರದೋ ಬರುವಿಕೆಗಾಗಿ ಹೆದರಿ ಅವಿತುಕೊಂಡಿದ್ದವು ಹಕ್ಕಿಗಳು. ರೈಲಿನ ಶಬ್ದಕ್ಕೆ ಹೆದರಿ ಶಬ್ದ ಮಾಡುವುದನ್ನೇ ಬಿಟ್ಟಿದವು. ಎರಡೂ ರೈಲು ಹಳಿಗಳು ಎರಡೂ ಜೀವಗಳಂತೆ. ಒಂದು ಗಂಡು ಜೀವ, ಇನ್ನೊಂದು ಹೆಣ್ಣು ಜೀವ. ಈ ಎರಡೂ ಹಳಿಗಳು ನಿಜವಾಗಿ ಪ್ರೀತಿ ಮಾಡಿ ದೂರವಾದ ಇಬ್ಬರು ಪ್ರೇಮಿಗಳಂತೆ . ಇವೆರಡರ ಮೇಲೆ ಬದುಕೆಂಬ ರೈಲು ಯಾವಾಗಲು ಚಲಿಸುತ್ತಿರುತ್ತದೆ. ಆದರೆ ಪ್ರೇಮಿಗಳೆಂಬ ಈ ಎರಡು ಹಳಿಗಳು ಎಂದಿಗೂ ಸೇರಲಾಗುವುದಿಲ್ಲ . ಆದರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲಿಕ್ಕಾಗುವುದಿಲ್ಲ. ಹಾಗೇನಾದರೂ ಒಂದನ್ನು ಬಿಟ್ಟು ಇನ್ನೊಂದು ಬದುಕಲು ಪ್ರಯತ್ನಿಸಿದರೆ , ಈ ಬದುಕೆಂಬ ರೈಲಿನ ಪಯಣವು ದಾರಿ ತಪ್ಪಿ ಯಮಲೋಕಕ್ಕೆ ನೇರವಾಗಿ ಹೋಗಬೇಕಾಗುತ್ತದೆ . ಜೊತೆಯಲ್ಲೇ ಇದ್ದರು ಇಲ್ಲದಂತೆ ಮೌನವಾಗಿ ಬದುಕೆಂಬ ರೈಲಿನೊಟ್ಟಿಗೆ ಚಲಿಸುವುದೊಂದೇ ದಾರಿ . ಈ ಬದುಕೆಂಬ ರೈಲು ಕೆಲವೊಮ್ಮೆ ರೈಲಿನ ಹಳಿಗಳ ಮೇಲೆ ಎಲ್ಲೆಂದರಲ್ಲಿ ನಿಂತೇ ಹೋಗುತ್ತದೆ. ಕಾರಣಗಳು ಸಾವಿರ ಇರಬಹುದು. ಈ ಎರಡು ಹಳಿಗಳು ನಿಂತುಹೋದ ಬದುಕೆಂಬ ರೈಲಿನ ಭಾರವನ್ನು ತಾಳಲಾರದೆ ಒಬ್ಬರೊನೊಬ್ಬರು ಮಾತನಾಡದೆ ಸಮಾಧಾನಪಡಿಸಿಕೊಂಡು , ಬರಿ ಕಣ್ಣುಗಳ್ಳಲೇ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸುತ್ತ ಈ ಬದುಕು ಇರುವವರೆಗೂ ಕಾಡಿನ ನಡುವಿನ ರೈಲು ಹಳಿಗಳು ಕೊರಗಿ ಕೊರಗಿ ಬದುಕುತ್ತಿರುತ್ತವೆ .


ಬುಧವಾರ, ಆಗಸ್ಟ್ 4, 2021

ಒಂಟಿ ಚಿರತೆ ..

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>


ಒಂದಾನೊಂದು ಕಾಲದಲ್ಲಿ , ತುಮಕೂರು ಜಿಲ್ಲೆ,ಕುಣಿಗಲ್ ತಾಲೂಕಿನ ಒಂದು ಪುಟ್ಟ ಗ್ರಾಮದಲ್ಲಿತ್ತೊಂದು ಒಂಟಿ ಚಿರತೆ . ಬಹುಷಃ ಬದುಕಿದಿದ್ದರೆ ಭಾರತದ ಅಭ್ರಾಹಂ ಲಿಂಕನ್ ಆಗುತ್ತಿದ್ದರೇನೋ . ಹೋಗ ಬಾರದ ಸಮಯದಲ್ಲಿ ಉಸಿರು ಹೊರಟೆ ಹೋಯಿತು . ಜನರ ಪಾಲಿನ ದೇವರು. ದೇವರಾದ ಮೇಲೆ ಜನರೊಟ್ಟಿಗೆ ದೇವರಿಗೆ ಇನ್ನೇನು ಕೆಲಸ. ಪೂಜಿಸಲಿ ,ಆರಾಧಿಸಲಿ ಎಂದು ಎಲ್ಲರನ್ನು ಬಿಟ್ಟೋಗಿರಬೇಕು.

 ಬಹುದಿನಗಳಿಂದ ನನ್ನನು ತೀವ್ರವಾಗಿ ಕಾಡುತ್ತಿದೆ ವ್ಯಕ್ತಿತ್ವವದು. ಗೊತ್ತಿದ್ದರೂ ಇದನ್ನ ದಾಖಲಿಸದ್ದಿದರೆ ತಪ್ಪಾಗಬಹುದೇನೋ .ಇದರ ಬಗ್ಗೆ ಹೇಳಲಿಕ್ಕೆ , ತಿಳಿದುಕೊಳ್ಳುವುದಕ್ಕೆ , ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಾಕಷ್ಟು ವಿಷಯಗಳಿವೆ . ಇದನ್ನು ಒಂದು ಪುಸ್ತಕದ ರೂಪದಲ್ಲಿ ತರಲು ಪ್ರಯತ್ನಿಸುತ್ತಿದ್ದೇನೆ . ಪುಸ್ತಕದ ಕೃಷಿ ಈಗಾಗಲೇ ಪ್ರಾರಂಭವಾಗಿದೆ. 

 ಚಿರತೆಯ ಜಾಡನ್ನು ಹಿಡಿದು ಹಿಂದೆ ಬಿದ್ದಿರುವ ಎಳೆಯ ಕರುವು ನಾನು . ಇದರಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಹುಚ್ಚುತನದ ಹಠ ನನಗೆ. ಇಲ್ಲಿ ಎಲ್ಲವೂ ಇದೆ. ದಶಕಗಳ ಹಿಂದೆ ಹಳ್ಳಿ ರಾಜಕೀಯದ ಮೇಲಾಟದಲ್ಲಿ ಗೆದ್ದವರಾರು ,ಉಳಿದವರಾರು ,ಹೋದವರಾರು. ಹೋದವರು ಸುಮ್ಮನೆ ಹೋದರ . ದಶಕಗಳ ಹಿಂದೆ ಇಟ್ಟ ಪ್ರತಿಯೊಂದು ಹೆಜ್ಜೆ ಗುರುತುಗಳು ಇನ್ನೂ ಅಳಿಸಿಲ್ಲ. ಸೋತು ಗೆದ್ದವರ ಕಥೆ.

 ಚಿರತೆಯ ಬೇಟೆ ಬಲು ರೋಚಕವಾಗಿರುತ್ತದೆ . ಕಾದು ನೋಡಿರಿ ...............................

ಮಂಗಳವಾರ, ಆಗಸ್ಟ್ 3, 2021

ಕಾರಣವಿಲ್ಲದ ಬದುಕು...

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>
" ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ", ಎಲ್ಲೋ ಕೇಳಿದ ಸಾಲುಗಳು ಪದೇ ಪದೇ ನೆನಪಾಗುತ್ತವೆ. ಕಳೆದುಹೋದ ದಿನಗಳಲ್ಲಿ ನನಸಾಗದ ಕನಸುಗಳನ್ನು ನೆನೆಯುತ್ತ ಸಮಯ ಕಳೆಯುವುದೇ ಬದುಕಾ ?. ಮುಂದೆ ಬರಲಿರುವ ದಿನಗಳನ್ನು ಬರಲಿ ಎಂದು ಕಾಯುತ್ತ ಕೂರುವುದೇ ಬದುಕಾ ?. ಇಲ್ಲಾ ಎಲ್ಲವನ್ನು ಮರೆತು ? ಮರೆಯಲಾಗದಿದ್ದಾಗ , ಮರೆತಂತೆ ನಟಿಸಿ ,ಮುಖದ ಮೇಲೆ ಒಂದು ಸಣ್ಣನೆಯ ಕಿರುನಗೆಯನ್ನು ಇಟ್ಟುಕೊಂಡು ,ಎಲ್ಲ ಮರೆತ್ತಿದ್ದೇನೆ ಎಂದು ಇರುವುದೇ ಬದುಕಾ?. ಈ ಬದುಕಿಗೆ ಯಾವ ಕಾರಣಗಳು ಇಲ್ಲ. ಕಾರಣಗಳು ಇದ್ದರು ಯಾವುದು ಶಾಶ್ವತವಲ್ಲ . "ಎಲ್ಲಿಯವರೆಗೆ ? ಈ ಹೃದಯದ ಬಡಿತ ನಿಲ್ಲುವವರೆಗೆ ". ಯಾರನ್ನಾದರೂ ಒಮ್ಮೆ ಕೇಳಿ ನೋಡಿರಿ "ಚೆನ್ನಾಗಿದ್ದೀರ"ಎಂದು. ಸುಖವಾಗಿದೀನಿ , ತುಂಬಾ ಸಂತೋಷವಾಗಿದೀನಿ ಎಂಬಿತ್ಯಾದಿ ಪದಗಳು ಯಾರ dictionary ಯಲ್ಲಿಯೂ ಇರುವುದಿಲ್ಲ. ಮನುಷ್ಯ ಎಂಬ ಪ್ರಾಣಿಗೆ ಯಾವುದರಲ್ಲೂ ಸುಖವಿರುವುದಿಲ್ಲ , ಎಲ್ಲವೂ ಸಿಕ್ಕ ಮೇಲೂ ಇನ್ನೂ ಏನೋ ಬೇಕು ಎಂದು ಮನಸ್ಸು, ದೇಹಗಳೆರಡೂ ಒಟ್ಟಿಗೆ meeting ಮಾಡಿ ನಿರ್ಧಾರಕ್ಕೆ ಬಂದು ಬಿಟ್ಟಿರುತ್ತವೆ. ಯಾರ ಬದುಕಿಗು ನಿರ್ದಿಷ್ಟ ಕಾರಣವಿರುವುದಿಲ್ಲ. ಎಲ್ಲರ ಬದುಕಿನಲ್ಲಿಯೂ ಮುಂದೆ ಏನು ? ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದು ಕಣ್ಣ ಮುಚ್ಚಿದೊಡನೆ ಕಣ್ಣ ಮುಂದೆ ಬಂದು ರಾತ್ರಿಯೆಲ್ಲಾ ಜಾಗರಣೆ ಮಾಡಿಸುತ್ತದೆ.

ಪಡೆದುಕೊಂಡವರು ಅಂಥ ಯಾರು ಇಲ್ಲ. ಒಂದು ರೀತಿಯಲ್ಲಿ ಎಲ್ಲರು ಕಳೆದುಕೊಂಡವರೇ . ಕಳೆದುಕೊಂಡ ಪ್ರೀತಿ , ಸ್ನೇಹ, ಬಾಲ್ಯ ,ದುಡ್ಡು,ಸಂಬಂಧ ,ಕೈ, ಕಾಲು , ಕಿಡ್ನಿ , ಮರೆತೇನೆಂದರು ಮತ್ತೆ ನೆನಪಾಗುವ ಹಳೆಯ ಸುಮಧುರವಾದ ಕ್ಷಣಗಳು, ಕಳೆದುಹೋದ ಮನಸು.

ನಾವು ಕಳೆದುಕೊಂಡವರು , ಬದುಕಿಗೆ ಕಾರಣ ಹುಡುಕುತ್ತಿರುವವರು. ಕಾರಣ ಸಿಕ್ಕವರಷ್ಟೇ ಅದೃಷ್ಟವಂತರು . ಇಲ್ಲದಿದ್ದರೆ ನಡು ರಸ್ತೆಯಲ್ಲಿ  ,ಉರಿ ಬಿಸಿಲಿನಲ್ಲಿ, BMTC ಬಸ್ಸಿನಲ್ಲಿ , ಕೂರಲು ಸೀಟೂ ಇಲ್ಲದೆ , ಅದೆಷ್ಟೋ ಸೆಕೆಂಡುಗಳ , ಟ್ರಾಫಿಕ್ ಜಾಮಿನಲ್ಲಿ ಸಿಕ್ಕಂತಾಗುತ್ತದೆ ನಮ್ಮ ಈ ಬದುಕು. ಬಸ್ಸಿನಿಂದ ಇಳಿಯುವ ಹಾಗು ಇಲ್ಲ .ಅದರೊಳಗೆ ನಿಲ್ಲುವ ಹಾಗು ಇಲ್ಲ. ಬೇರೆ ದಾರಿ ಕಾಣದೆ , ಇಷ್ಟವಿಲ್ಲದಿದ್ದರು ಅನಿವಾರ್ಯೆತೆಗೆ  ನಿಲ್ಲಲೇಬೇಕಾಗುತ್ತದೆ.
ಬದುಕಿಗೊಂದು ಅರ್ಥ ಹುಡುಕೋಣ , ಅರ್ಥಕೊಂದು ಉದ್ದೇಶ , ಉದ್ದೇಶದೆಡೆಗೆ ಮುಂದಿನ ಎಲ್ಲಾ ಹೆಜ್ಜೆಗಳನ್ನುಇಟ್ಟರಷ್ಟೇ ಬದುಕು.

ಕಾರಣವಿಲ್ಲದ ಬದುಕಿನೆಡೆಗೆ ಕಾರಣ ಹುಡುಕ ಹೊರಟ ಬದುಕೇ ನಿಜವಾದ ಬದುಕು.

ಸೋಮವಾರ, ಆಗಸ್ಟ್ 2, 2021

ಬೆಳಕು

 <script async src="https://pagead2.googlesyndication.com/pagead/js/adsbygoogle.js?client=ca-pub-2186354125220280"

     crossorigin="anonymous"></script>
ಕಾಡು, ಮೇಡು ಪ್ರದೇಶದಲ್ಲಿ, ವಿದ್ಯುತ್ ಸಂಪರ್ಕವೇ ಇಲ್ಲದ ಒಂದು ಪುಟ್ಟ ಹಳ್ಳಿಯಲ್ಲಿ ,ಅಮವಾಸ್ಯೆಯ ಕತ್ತಲೆಯಲ್ಲಿ, ತೋಟದ ಮನೆಯ ಚಾವಣಿಯ ಮೇಲೊಂದು ದೀಪ. ದೀಪದಿಂದ ಪ್ರಜ್ವಲಿಸುತ್ತಲಿತ್ತೊಂದು ಬೆಳಕು. ಆ ಬೆಳಕಿಗೆ ಎಷ್ಟೊಂದು ಮಹಾತ್ವವಲ್ಲವೇ ? ನಮೆಲ್ಲರ ಮನೆಯಲ್ಲಿ ಒಳ್ಳೆಯ ಟುಬೆಲೈಟ್ ಗಳಿಂದ ನಮ್ಮ ಮನೆಯು ಬೆಳಕಿನಿಂದ ತುಂಬಿರುತ್ತದೆ . ಬೀದಿ ದೀಪಗಳು ಹೆಜ್ಜೆ ಹೆಜ್ಜೆಗೂ ನಾ ಮುಂದು ತಾ ಮುಂದು ಎಂದು ಕಾಂಪಿಟಿಷನ್ ಗೆ ಇಳಿದು ಇಡೀ ಬೀದಿಯನ್ನುಮುಂಜಾನೆಯವರೆಗೂ ಬೆಳಗುತ್ತಿರುತ್ತವೆ . ಆದರೂ ನಮ್ಮ ಬದುಕಿನಲ್ಲಿ ಬರಿ ಕತ್ತಲೆಯೇ ತುಂಬಿರುತ್ತದೆ. ಬರಿ ಕತ್ತಲೆಯೇ ತುಂಬಿರುವ ಈ ಬದುಕಿಗೆ ಎಷ್ಟೇ ದೊಡ್ಡ ಟುಬೆಲೈಟ್ ನ ಬೆಳಕು  ಕೂಡ ಬರಿ ಕತ್ತಲೆಯೇ.  ಬೆಳಕಿನಡಿಯಲ್ಲಿಯೇ ನಿಂತು ಈ ಬರಡಾದ ಬದುಕಿಗೆ ಬೆಳಕು ಯಾವಾಗ ಬರುತ್ತದೆ ಎಂದು ಯೋಚಿಸುತ್ತಿರುತ್ತೇವೆ .ಈ ಬಾಳ ಪಯಣದಲ್ಲಿ ಬಿಡಿಸಿಕೊಳ್ಳಲಾಗದ ಬಂದಗಳು ಅದೆಷ್ಟೋ, ಹೊರಲಾಗದ ದುಃಖದ ಹೊರೆಯ ಭಾರದ ತೂಕವೆಷ್ಟೋ. ಏನೋ ನೆನಪಾದಾಗ ಕಣ್ಣುಗಳು ಯಾರನ್ನು ಕೇಳದೆ ತುಂಬಿಕೊಂಡು ಬಂದಾಗ , ಕಣ್ಣಿನ ಹನಿಗಳು ಕೆನ್ನೆಯನ್ನು ಸ್ಪರ್ಶಿಸಿ ಕಚಗುಳಿಯಿಡುತ ಅಳಿಸುತ್ತಿರುವಾಗ ಯಾವ ದೊಡ್ಡ ಬೆಳಕು ಕೂಡ ಏನು ಮಾಡಲು ಸಾಧ್ಯ. ಬರಿ ಕತ್ತಲೆಯೇ ತುಂಬಿರುವ ಈ ಅಮಾವಾಸ್ಯೆಯ ಬದುಕಿನಲ್ಲಿ ಬೆಳದಿಂಗಳ ಚಂದಿರನ ಪ್ರವೇಶಕ್ಕೆ ಅನುಮತಿಯನ್ನೇನಾದರೂ ಪಡೆಯಬೇಕಾ? ಕಾದಿರುವೆ ನಿನಗಾಗಿ ನೀ ಎಂದಾದರೂ ಒಮ್ಮೆ ಬಂದೆ ಬರುತ್ತೀಯ ,ಬರಿ ಕತ್ತಲೆಯೇ ತುಂಬಿರುವ ಈ ಬದುಕಿನಲ್ಲಿ ಬೆಳಕು ತಂದೆ ತರುತ್ತೀಯ ಎಂಬ ನಂಬಿಕೆಯಿಂದ.

ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮ ಪಯಣ .................... 

ಸಂಬಂಧದಲ್ಲಿ ಬಿರುಕು

 

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>

ಈ ಬಿರುಕು ಎಂಬ ಪದಕ್ಕೂ , ಹೆಣ್ಣುಮಕ್ಕಳಿಗೂ ಅವಿನಾಭಾವ ಸಂಬಂಧ . ಸಾಮಾನ್ಯವಾಗಿ ಬಿರುಕು ಮೂಡುವುದು ಹೆಂಗಸರಿಂದಲೇ . ಗಂಡಸರು ಯಾವ ಸಂಬಂಧವನ್ನು ಮುರಿದುಕೊಳ್ಳುವುದಿಲ್ಲ . ಅವರು ಎಂದಿಗೂ ದ್ವೇಷ ಸಾಧಿಸುವುದಿಲ್ಲ . ಎಂಥಾ ದೊಡ್ಡ ಜಗಳವೇ ಆದರೂ ಒಂದೆರಡು ದಿನಗಳಲ್ಲಿ ಸರಿಹೋಗಿಬಿಡುತ್ತಾರೆ . ಆದರೆ ನಮ್ಮ ಹೆಣ್ಣುಮಕ್ಕಳು ಹಾಗಲ್ಲವೇ ಅಲ್ಲ . ಅವರು ತುಂಬಾ ವಿಶಾಲ ಹೃದಯದವರು , ಒಂದು ಸಣ್ಣ  ಕಲಹವನ್ನು ದೊಡ್ಡ ಕಂದಕವನ್ನಾಗಿ ಮಾಡಿ ಎಲ್ಲಾ ವಿಚಾರದಲ್ಲೂ ಅವರಿಗೆ competition ಕೊಡಲು ಶುರು ಮಾಡುತ್ತಾರೆ . ಒಂದು ಸೀರೆಯ ವಿಚಾರದಿಂದ ಹಿಡಿದು ತಮ್ಮ ತಮ್ಮ ಮಕ್ಕಳ ವಿದ್ಯಾಭ್ಯಾಸದ ತನಕ , ಮನೆಯಲ್ಲಿ ತೊಳೆಯುವ ಪಾತ್ರೆಯ powder ಇಂದ ಹಿಡಿದು ತಮ್ಮ ಮನೆಯ ಯಜಮಾನರು ಹಾಕುವ ಜೀನ್ಸ್ ಪ್ಯಾಂಟಿನ ಬೆಲೆಯವರೆಗೂ  ಎಲ್ಲದರಲ್ಲೂ ತಮ್ಮ ಎದುರಾಳಿಯ ವಿರುದ್ಧ ಹಠಕ್ಕೆ ಬೀಳುತ್ತಾರೆ . ಸಂಬಂಧದಲ್ಲಿ ಬಿರುಕು ಮುಡಲು ಇಷ್ಟು ಸಾಕಲ್ಲವೇ . ಒಂದು ಸಣ್ಣ ಮನಸ್ತಾಪವನ್ನು ದೊಡ್ಡ ಬಿರುಕನ್ನಾಗಿ ಮಾಡಿ ಕೊನೆಗೆ ಒಂದು ದಿನ ಆ ಬಿರುಕನ್ನು ಸಹ ಒಡೆದು ಅಲ್ಲೂ ಒಸಲಿನ ಮೇಲೆ ಸೇರಿಟ್ಟು ಜೋರಾಗಿ ಒದ್ದು ಬರಿ ಬಿರುಕಾಗಿದ್ದ ಸಂಬಂಧವೆಂಬ ಮನೆಯನ್ನು ಬಲಗಾಲಿಟ್ಟು ಒಳಗೆ ಬಂದು ತಮ್ಮ ಪ್ರತಾಪವನ್ನು ತೋರಿಸಿ ಬಿಡುತ್ತಾರೆ . ನಮ್ಮ ಹೆಣ್ಣುಮಕ್ಕಳು ಯಾರಿಗೂ ಕಡಿಮೆಯಿಲ್ಲ , ಎಲ್ಲದರಲ್ಲೂ ಮುಂದು  ತಾಳ್ಮೆ, ಸಹನೆ ,ತ್ಯಾಗ, ಪ್ರೀತಿ  ಆಡಂಬರ ಎಲ್ಲದರಲ್ಲೂ ಅವರೇ ಒಂದು ಕೈ ಮೇಲೂ . ಆದರೆ ಸಂಬಂಧ ಎಂಬ ವಿಷಯ ಬಂದಾಗ ಅಲ್ಲಿ ಸ್ವಾಭಿಮಾನದ ಪ್ರಶ್ನೆ ಬಂದೆ ಬರುತ್ತದೆ . ಸ್ವಾಭಿಮಾನದ ಪ್ರಶ್ನೆ ಬಂದಾಗ ಅದನ್ನು ನಮ್ಮ ಹೆಣ್ಣುಮಕ್ಕಳು ಎಂದಿಗೂ ಬಿಡಲು ತಯಾರಿರುವುದಿಲ್ಲ . ಒಮ್ಮೆ ಸ್ವಾಭಿಮಾನ ಅಹಂಕಾರಕ್ಕೆ ತಿರುಗಿದಾಗ ಸಂಬಂಧದಲ್ಲಿ ಬರಿ ಬಿರುಕಾಗಿದ್ದ ಮಹಾಗೋಡೆ ಒಡೆದು ಹೋಗುತ್ತದೆ .....


ನಿರೀಕ್ಷೆ

 <script async src="https://pagead2.googlesyndication.com/pagead/js/adsbygoogle.js?client=ca-pub-2186354125220280"

     crossorigin="anonymous"></script>

ನಿರುದ್ಯೋಗಿಗಳಿಗೆ ಉದ್ಯೋಗದ ನಿರೀಕ್ಷೆ ,ಉದ್ಯೋಗಸ್ತರಿಗೆ ತಿಂಗಳಿಗೊಮ್ಮೆ ಬರುವ ಸಂಬಳದ ನಿರೀಕ್ಷೆ.

ಬ್ರಹ್ಮಚಾರಿಗಳಿಗೆ ಮದುವೆಯ ನಿರೀಕ್ಷೆ ,ಮದುವೆ  ಆದವರಿಗೆ ಮಕ್ಕಳ ನೀರಿಕ್ಷೆ .

ಕಳೆದುಕೊಂಡ ಹುಡುಗಿ ಮತ್ತೆ ಬರುವಳೆಂಬ
ನಿರೀಕ್ಷೆ  ,
ಪ್ರೀತಿಸಿದವನಿಗೆ ಬೊಗಸೆ ಪ್ರೀತಿಯ
ನಿರೀಕ್ಷೆ.

ರೈತರಿಗೆ ಮಳೆ ಬರುವ ನಿರೀಕ್ಷೆ 
ಹಸಿದವನಿಗೆ ಅನ್ನದ ನಿರೀಕ್ಷೆ.

ಒಬ್ಬೊಬ್ಬರಿಗೂ ಅವರವರಿಗೆ ಅನುಗುಣವಾಗಿ ಒಂದೊಂದು ನಿರೀಕ್ಷೆಗಳು , ಈ ನಿರೀಕ್ಷೆಗಳು ಯಾರಿಗೂ ಎಂದಿಗೂ  ಹುಸಿಯಾಗದಿರಲಿ , ಹುಸಿಯಾದರು ಮತ್ತೆ ಬದುಕು ನಡೆಸುವ ನಿರೀಕ್ಷೆ....


ಗೋಡೆ

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>

ಬದುಕಿನ ಎಲ್ಲಾ ಬಣ್ಣಗಳು ನಮಗೆ ಕಾಣುವುದು ಗೋಡೆಯೆಲ್ಲೆ . ಗೋಡೆಗೆ ಕನ್ನಡಿ ಇಲ್ಲದಿದ್ದರೂ  ಅದನ್ನು ಒಮ್ಮೆ ನೋಡಿದಾಗ ಯಾವುದು ನಮ್ಮ ಕಣ್ಣ ಮುಂದೆ ಬರಬೇಕೋ ಅದು ಖಂಡಿತಾ ಬಂದೆ ಬರುತ್ತದೆ . ನಮ್ಮ ತಪ್ಪುಗಳು, ಒಪ್ಪುಗಳು , ನಮ್ಮೊಳಗಿನ ಆಸೆ ಆಕಾಂಕ್ಷೆಗಳು , ಪ್ರೀತಿಸಿ ಬಿಟ್ಟೋದ ಹಳೆಯ ಹುಡುಗಿಯ ಮಧುರವಾದ ನೆನಪುಗಳು . ಕಳೆದುಕೊಂಡ ಸ್ನೇಹಿತರು .ಮತ್ತೆ ಎಲ್ಲವೂ ಬೇಕು ಎನ್ನುವ ಭಾವನೆಗಳಿಗೆ ಸ್ಪಂದಿಸಲು ಅಡ್ಡ ಬರುವ ಮತ್ತದೇ ಮಹಾಗೋಡೆಯೂ . ನಾವು ನಮ್ಮ ಗೋಡೆಯ ಮೇಲೆ ಬರೆದ ಅಳಿಸಲಾಗದ ಬರಹಗಳು ಅದೆಷ್ಟೋ.ಗೊಡೆ ಸತ್ಯವನ್ನೇ ಹೇಳುತ್ತದೆ ಸತ್ಯವನ್ನು ಬಿಟ್ಟು ಮತ್ತೇನನ್ನು ಹೇಳುವುದಿಲ್ಲ .ನಾವು ನಮ್ಮ ವೈಯಕ್ತಿಕ ಬದುಕಿನಲ್ಲಿ ಎಷ್ಟೇ ಮುಖವಾಡ ಹಾಕಿಕೊಂಡು ಬದುಕುತ್ತಿದ್ದರು ಎಲ್ಲಾ ಮುಗಿದ ಮೇಲೆ ಒಮ್ಮೆ ನಮ್ಮ ಬೆಡ್ರೂಮ್ಗೆ ಬಂದು , ಯಾರು ಇಲ್ಲದೆ ಇದ್ದಾಗ ಗೋಡೆಯ ಮುಂದೆ ನಿಂತು ಅದನ್ನೇ ದಿಟ್ಟಿಸಿ ನೋಡಿದಾಗ ನಿಜವಾದ ನಾವು ಯಾರೆಂದು ಗೊತ್ತಾಗುತ್ತದೆ...


ನಿನ್ನ ತಬ್ಬಿ ಜಗವ ಮರೆವೆ

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>

ಚಲಿಸುತ್ತಿರುವ ರೈಲಿನಲ್ಲಿ , ಕಿಟಕಿಯ ಪಕ್ಕದಲ್ಲಿ , ಮಲೆನಾಡಿನ ಸುಂದರವಾದ ಪ್ರದೇಶದಲ್ಲಿ , ಜೋರಾಗಿ ಸುರಿದು ನಿಂತಿರುವ   ಮಳೆಯ ಕೊನೆಯ ಹನಿಯು ರೈಲಿನ ಕಿಟಕಿಯ ಕಂಬಿಗಳಲ್ಲಿ .
ಇದರ ಜೊತೆಗೆ ನಿನ್ನ ನಗುವೊಂದ್ದಿದರೆ ಸಾಕು  ನಿನ್ನ ತಬ್ಬಿ ಜಗವ ಮರೆಯಲು ...


ಸಪ್ತಪದಿ

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>

ಸಪ್ತಪದಿ ಎಂದರೆ ಮೊದಲು ನಮಗೆ ನೆನಪಾಗೋದು ಡಾ.ರಾಜಕುಮಾರ್ ರವರು ಹಾಡಿರುವ ಗೀತೆ .ಸಪ್ತಪದಿಯ ಅರ್ಥ ನನ್ನಹಂತಹ ಬಹುತೇಕ ಜನರಿಗೆ ತಿಳಿದ್ದಿದೆ ಈ ಗೀತೆಯ ಮೂಲಕ ಎಂದರೆ ತಪ್ಪಾಗಲಾರದು .ಸಪ್ತಪದಿ ಎಂದರೆ ಏಳು ಹೆಜ್ಜೆಗಳ ಅನುಬಂಧ .ಒಂದೊಂದು ಹೆಜ್ಜೆಗೂ ಒಂದೊಂದು ಅರ್ಥ .ಏಳು ಹೆಜ್ಜೆಗಳ ಸಪ್ತಪದಿಯನ್ನು ತುಳಿದು ಮದುವೆಯಾದ ಜೋಡಿಯು ಏಳೇಳು ಜನ್ಮಗಳು ಜೊತೆಯಾಗಿರುತ್ತಾರೆ ಎಂಬ ನಂಬಿಕೆ .ಒಂದು ಭಾವನಾತ್ಮಕ ಸನ್ನಿವೇಶ .

ಇದು ಏಳು ಹೆಜ್ಜೆಗಳ ಸಂಬಂಧ
ಇದು ಏಳು ಜನ್ಮಗಳ ಅನುಬಂಧ
ತುಂಬಿರಲಿ  ಬಾಳ ತುಂಬೆಲ್ಲ ಬರಿ ಆನಂದ.


ಜೊತೆ ಪಯಣದಾರಂಭ

 <script async src="https://pagead2.googlesyndication.com/pagead/js/adsbygoogle.js?client=ca-pub-2186354125220280"

     crossorigin="anonymous"></script>

ನಿನ್ನೆಯೆಷ್ಟೇ ಸಪ್ತಪದಿ ತುಳಿದ್ದಿದಾಯಿತು .ಇನ್ನೇನಿದ್ದರೂ ಜೊತೆ ಜೊತೆಯಲ್ಲೇ ನಮ್ಮ ಈ ಜೀವನದ ಪಯಣದಾರಂಭ . ಪ್ರತಿ ಅಂತ್ಯಕ್ಕೂ ಒಂದು ಆರಂಭ .ಇದು ಅಂತ್ಯವೋ ? ಆರಂಭವೋ ? ಗೊತ್ತಿಲ್ಲ . ಇರುವವರು ಯಾರೋ , ಜೊತೆ ಬರುವವರು ಯಾರೋ . ಜೊತೆಯಲ್ಲಿ ಬರಲು ನಿರ್ದರಿಸಿದ್ದಾಗಿದೆ .ಇದು ನನ್ನ ನಿರ್ಧಾರವೋ  ? ಯಾರದೋ ನಿರ್ಧಾರಕ್ಕೆ ಸಮತಿಸಿದ್ದೋ ?, ನಿಂದು ಹಾಗೆಯೆ ಇರಬೇಕು ಅಥವಾ ಇಲ್ಲದೇನೆ ಇರಬಹುದು ಎಲ್ಲವೂ ನಿಗೂಢ. ಆದರೆ ಒಂದಂತೂ ನಿಜ , ನಿನ್ನ ಬದುಕಿನ ಇನ್ನುಳಿದ ಎಲ್ಲಾ ಕ್ಷಣಗಳಲ್ಲೂ ಕೂಡ ಎಂದಿಗೂ ನಿನ್ನ ನೆರಳು ನಿನಗೆ ಕಾಣಿಸದು .ಏಕೆಂದರೆ ನಿನ್ನ ನೆರಳಿಗೆ ಬದಲಾಗಿ ನಾನಿರುವೆ . ಪಯಣ ಎಲ್ಲಿಗಾದರೂ ಸರಿ ಸ್ವರ್ಗಕ್ಕಾದರೂ ಸರಿ ನರಕ್ಕಕಾದರು ಸರಿ ನಿನ್ನ ಹೆಜ್ಜೆ ಗುರುತುಗಳ ಮೇಲೆ ನನ್ನ ಹೆಜ್ಜೆಗಳನ್ನು ಇಡಲು ನನ್ನ ಕಾಲುಗಳು ಎಂದಿಗೂ ಯಾವ ಪ್ರಶ್ನೆಗಳನ್ನು ಕೇಳುವುದಿಲ್ಲ . ಜೊತೆ ಪಯಣವನ್ನು ಸಂಭ್ರಮದಿಂದ ಆರಂಭಿಸೋಣವೇ  ......


ಪ್ರೇಮ ಪ್ರಸ್ತಾವನೆ

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>

ನನ್ನ ಪ್ರೀತಿಯ ಹುಡುಗಿ , ನೀ ಎಲ್ಲಿರುವೆ  ನೀ ಹೇಗಿರುವೆ. ನೀ ಎಲ್ಲಾದರೂ ಇರು ನೀ ಹೇಗಾದರೂ ಇರು  ಒಮ್ಮೆ ಬಂದು ನನ್ನೀ ಕಂಗಳನು ನೋಡು , ನಿನ್ನ ಕಣ್ಣುಗಳಲ್ಲಿ ನನ್ನೀ ಮೊಗವನೊಮ್ಮೆ ನೋಡುವ ಆಸೆ ನನಗೆ . ಜೀವ ಹೋಗುವ ಮುನ್ನ ಈ ಮನದಲ್ಲಿರುವ ನನ್ನೀ ಪ್ರೇಮ ನಿವೇದನೆಯನ್ನು ಸ್ವೀಕರಿಸಿ  ಬೇಗನೆ ಅಪ್ಪಿ ಒಪ್ಪಿಕೊಂಡು ಬಿಡು.  ಈ ಜೀವನವೆಲ್ಲ ನಿನ್ನ ಕೈಯನ್ನು ಹಿಡಿದು ಜೊತೆ ಜೊತೆಯಲಿ ಹೆಜ್ಜೆ ಹಾಕುತ್ತೆನೆ .

ನನ್ನ ಪ್ರೀತಿಯ ಹುಡುಗಿ  ನೀ ಎಲ್ಲಿರುವೆ  ನೀ ಹೇಗಿರುವೆ ,
ನಿನ್ನ ಪ್ರೀತಿಯ ಹುಡುಗ , ನಾ ಇಲ್ಲಿರುವೆ
ನಾ ನೊಂದಿರುವೆ.... 


ಪ್ರೇಮ ನಿವೇದನೆ


<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>

ನನ್ನ ಪ್ರೀತಿಯ ಹುಡುಗಿ , ನಾನು ನಿನ್ನನ್ನ ಮೊದಲ ಸಲ ನೋಡಿದ ಕೂಡಲೇ ಇದನ್ನು ನೇರವಾಗಿ ನಿನ್ನ ಹತ್ತಿರ ಹೇಳಬೇಕಿತ್ತೇನೋ , ಆದರೆ let's be practical ಎಲ್ಲವನ್ನು ನೇರವಾಗಿ ಹೇಗೆ ಹೇಳಲು ಸಾಧ್ಯ ? ಅದು ನಿನ್ನಂತ ಮುದ್ದಾದ , ಚೆಲುವಾದ ,ಸುಂದರವಾದ ಬಟ್ಟಲಿನ ಕಣ್ಣಿನ ಹುಡುಗಿ ಮುಂದೆ ನಿಂತು. ನಾನು ನಿನ್ನನು ನೋಡಿದ ಕ್ಷಣವನ್ನು ಒಮ್ಮೆ ನೆನಪಿಸಿಕೊಂಡರೆ ಒಮ್ಮೆಲೇ ಮೈ ರೋಮಾಂಚನಗೊಂಡಂತೆ ಆಗುತ್ತದೆ.  ಆ ಕ್ಷಣ ಅದು ಏನಾಗುತ್ತಿದೆ , ತುಟಿಗಳಿಂದ ಆಚೆ ಬಾರದ ನಾಲಿಗೆ ಅಲ್ಲೇ ಸಿಲುಕಿಕೊಂಡು ಮಾತು ಬಾರದ ಮೂಗನಂತೆ , ರೆಪ್ಪೆಯೆನು ಅಲುಗಾಡಿಸಲು ಆಗದ ಕುರುಡನಂತೆ  , ನಿಂತಲ್ಲೇ ನಿಂತು ಒಂದು ಹೆಜ್ಜೆಯೆನ್ನು ಮುಂದೆ ಇಡಲು ಆಗದ ಕುಂಟನಂತೆ . ನನ್ನ ಇಡೀ ಈ ದೇಹವೇ  ನನ್ನ ಹತೋಟಿಯ ತಪ್ಪಿ , ನನ್ನ ಸುತ್ತ ಮುತ್ತಲು ಏನು ನಡೆಯುತ್ತಿದೆ ಎಂದು ತಿಳಿಯದಷ್ಟು , ಇನ್ನೂ ಹೇಳಬೇಕೆಂದರೆ ಜೀವವಿರುವ ವಿಗ್ರಹದಂತೆ ನಿಂತುಕೊಂಡ ಆ ಕ್ಷಣ , ನಿಜಕ್ಕು ಕೂಡ ಎಂದು ಮರೆಯಲಾಗದ ಬರಗಾಲದಲ್ಲಿ ಬಂದು ನೆಲಕಪ್ಪಳಿಸಿದ ಭೀಕರ ಮಳೆ . ಅಂದಿನಿಂದ ಇಂದಿನವರೆಗೂ ನನ್ನ ದಿನದ ಇಪ್ಪತುನಾಲಕು ಗಂಟೆಯ ಎಲ್ಲಾ ಕ್ಷಣಗಳನ್ನು ನೀನು ಆವರಿಸಿಕೊಂಡು ಬಿಟ್ಟೆ. ನನ್ನಲಿ ನಾನು ನಿನ್ನನು ಕಂಡುಕೊಳ್ಳುತಿದ್ದೇನೆ . ನಿನ್ನನು ನಾನು ಅದೆಷ್ಟೋ ಬಾರಿ ಮಾತನಾಡಿಸಲು ಪ್ರಯತ್ನಿಸಿದೆ , ಆದರೆ ಅದೇಕೋ ನಿನ್ನ ಹತ್ತಿರ ಬಂದ ಕೂಡಲೇ ಮಾತುಗಳೆಲ್ಲ ಬರಿ ಮೌನವಾಗಿ ಉಳಿದು  , ಭಾವನೆಗಳ ಅಲೆಗಳು ಸುನಾಮಿಯ ರೀತಿ ಅತಿವೇಗವಾಗಿ ಎತ್ತರವಾಗಿ ಬಂದು ಸಮುದ್ರದ ದಂಡೆಗೆ ಬಂದು ಅಪ್ಪಳಿಸುತ್ತಿವೆ. ಈ ಭೀಕರ ಭಾವನೆಗಳ ಸುನಾಮಿಗೆ ಸಿಲುಕಿ ನಾನು ಉಳಿಯುತ್ತೇನಾ ? ಎನ್ನುವುದೊಂದೇ ನನ್ನ ಯಕ್ಷ ಪ್ರಶ್ನೆ. ನಾನು ನಿನ್ನ ಹಿಂದೆ  ಬಿದ್ದು ನಿನಗೇ ತೊಂದರೆ ಕೊಡಲು ಇಷ್ಟಪಡುವುದಿಲ್ಲ. ನಿನ್ನಿಂದ ನಾನು ಏನನ್ನು ಬಯಸುತೇನೆ ಎಂದು ಹೇಳಲು ಪ್ರಯತ್ನುಸುತ್ತೆನೆ. ಈ ಪ್ರೀತಿ ಎಂಬ ಮಾಯೆ ಯಾವಾಗ , ಹೇಗೆ , ಯಾವ ಕಾರಣಕ್ಕೆ , ಯಾರ  ಮನಸಿನಲ್ಲಿ ಹೇಗೆ ಹುಟ್ಟುತ್ತದೆ ಎಂದು ಹೇಳಲು ಇವತ್ತಿನವರೆಗೂ ಯಾರಿಗೂ ಸಾಧ್ಯವಾಗಿಲ್ಲ , ಮತ್ತೆ ನಾನು ಮಾತ್ರ ಹೇಗೆ ಹೇಳಲಿ. ಇದನ್ನು ವಿವರವಾಗಿ explain ಮಾಡುವಷ್ಟು ಬುದ್ದಿವಂತನು ನಾನಲ್ಲ ನೇರವಾಗಿ ಹೇಳುವಷ್ಟು ದೈರ್ಯವೂ ನನಗಿಲ್ಲ . ಈ 4G ಯುಗದಲ್ಲಿ ಹೇಳಬೇಕೆಂದುಕೊಂಡಿದ್ದನ್ನು ಕ್ಷಣಮಾತ್ರದಲ್ಲಿ ಹೇಳಿ ಮುಗಿಸಿಬಿಡಬಹುದು. ಆದರೆ ನಾನು ನಿನಗೆ ಹೇಳಬೇಕೆಂದುಕೊಂಡಿದ್ದನ್ನು ತುಂಬು ಹೃದಯದಲ್ಲಿ ಇಷ್ಟು ದಿನ ಅಡಗಿದ ಭಾವನೆಗಳ ಭಾರವನ್ನು ಹೊರಲಾಗದೆ ಈ ಅಕ್ಷರಗಳ ಮುಖಾಂತರ ಅವುಗಳನ್ನೆಲ್ಲ ಹೊರಹಾಕಿ ಹೇಳಲು ಬಯಸುತಿದ್ದೇನೆ. ನಂಗೆ ನೀನು ಬೇಕು ಅನ್ನೋದಕ್ಕಿಂತ , ನಿನಗೆ ನಾನು ಬೇಕು.  ನಾನು ಮಾತ್ರ ನಿನ್ನ ಜೊತೆಯಲ್ಲಿ ಇರಬೇಕು. U would be happy if I am right next to u. ನಿನ್ನನ್ನ ನೋಡಿಕೊಳ್ಳುವುದಕ್ಕೆ , ಮುದ್ದು ಮಾಡುವುದಕ್ಕೆ  , ಪ್ರೀತಿಸುವುದಕ್ಕೆ , ಎಲ್ಲವುದಕ್ಕು. ಮುಳ್ಳಿನಂತಿರುವ ಈ ಕೆಟ್ಟ ಪ್ರಪಂಚದ ಮಧ್ಯದಲ್ಲಿ ಸುಂದರವಾಗಿ ಅರಳಿರುವ ಗುಲಾಬಿ ಹೂವು ನೀನು.  ನನಷ್ಟು ಮೃದುವಾಗಿ ಯಾರು ನಿನ್ನನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂಬ ನಂಬಿಕೆ . ಅದೆಷ್ಟೋ ಬಾರಿ ನೀನು ಬರುವ ಹಾದಿಯಲ್ಲಿ  , ನಿನಗೆ ಕಾಣದ ಹಾಗೆ ಬಚ್ಚಿಟ್ಟುಕೊಂಡು , ನಿನಗರಿವಿಲ್ಲದಂತೆ ನಿನ್ನನು ಕದ್ದು ಕದ್ದು ನೋಡುತಿದ್ದ ಕ್ಷಣಗಳನ್ನು , ಆ ಕ್ಷಣಗಳ್ಲಲಿ ನಾನು ಅನುಭವಿಸುತ್ತಿದ್ದ ಆನಂದವನ್ನು ನನಗೆ ಇಲ್ಲಿ ವಿವರಿಸಲು ಪದಗಳೇ ಸಿಗುತ್ತಿಲ್ಲ. ಕೆಲವೊಮ್ಮೆ ನೀನು ಬರದ್ದಿದಾಗ ನನಗೆ ಆದ ನೋವುಗಳಿಂದ ಅಕ್ಷರಗಳ  ಮುಖಾಂತರ ಹಾಳೆಯ ಮೇಲೆ ಗೀಚಿ ಬಿಸಾಡಿದ ಕವನಗಳು ಅದೆಷ್ಟೋ.


ನೀ ಬರುವ ದಾರಿಯ ನಾ ತಿಳಿದಿರುವೆ
ನಿನಗಾಗಿ ಕಾದು ನಾ ಕುಳಿತಿರುವೆ .
ಬರದೇ ನೀ ಹೋದೆ ಯಾಕೆ ತೆರೆಮರೆಗೆ
ಬಿಡದೆ ನಾ ಕಾಯುವೆ ನೀ ಬರೋವರೆಗೆ .

ನೀ ಬರುವ ದಾರಿಗೆ ನಾ ಹಾಸಿದೆ ಹೂವಿನ ಹಾಸಿಗೆ ,
ಬಂದ ನಿನ್ನನ್ನು ನೋಡಿದ ನನಗೆ ಕಾಡಿತು ನಿನ್ನ ಕಾಡಿಗೆ .
ಮಳೆ ಬಂದ ಮೇಲೆ ನನಗೆ ತಿಳಿಯಿತು ಅದು ಬರಿ ಕನಸೆಂದು ,
ಆದರೂ ಬಿಡದೆ ನಾ ಕಾಯುವೆ ನಿನ್ನ ಪ್ರೀತಿಗಿಂದು .
ಇದುವೇ ನನ್ನ ದಿನನಿತ್ಯದ ದಿನಚರಿ ,
ನಿಜವಾಗಿ ನೀ  ಬಂದರು ನನಗದುವೇ ಅಚ್ಚರಿ .
ನಿನ್ನಯ ಕಿರುನಗೆ ನನ್ನನು ಕಾಡಿತು
ನನ್ನುಸಿರು ನಿಲ್ಲುವ ಗಳಿಗೆ  ನನಗೆ ತಿಳಿಯಿತು ....

ಈ ಭಾವನೆಗಳನ್ನು ಇನ್ನು ನನ್ನ ಕೈಯಲ್ಲಿ ಮುಚ್ಚಿಡಲು ಸಾಧ್ಯವಿಲ್ಲ .ಹೇಳಲಿಕ್ಕೂ ಆಗದೆ , ಮುಚ್ಚಿಡಲು ಆಗದೆ ಬೇರೆ ದಾರಿಯು ಕಾಣದೆ , ಎಲ್ಲಿ ನೀನು ನನ್ನಿಂದ ದೂರವಾಗಿ ಬಿಡುತ್ತೀಯೋ ಎಂಬ ಅಂಜಿಕೆಯಿಂದ ನಿನಗೆ ಈ ಪತ್ರವನ್ನು ಬರೆಯುತ್ತಿದ್ದೇನೆ . ಇದನ್ನು ನೀನು ಓದುತ್ತಿಯೋ ಅಥವಾ ಕಸದ ಬುಟ್ಟಿಗೆ ಬಿಸಾಡುತ್ತಿಯೋ ಈ ಕ್ಷಣಕ್ಕೆ ನನಗೆ ಅದರ ಅರಿವಿಲ್ಲ.  ಪ್ರೀತಿ ಎಂದರೆ ದೇವರ ರೀತಿ . ಈ ಪ್ರೀತಿ ಎಂಬ ಒಂದೇ ಭಾವನೆ ಇಡೀ ಜಗತ್ತಿನಲ್ಲಿ ನಿಷ್ಕಲ್ಮಷವಾದದ್ದು .ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದೇವರು ಇರುತ್ತಾನೆ ಎಂಬ ನಂಬಿಕೆ ನನಗೆ .ಈ ನನ್ನ ಪುಟ್ಟ ಹೃದಯದಲ್ಲಿ ನಿನ್ನ ಮೇಲಿನ ಪ್ರೀತಿ ಎಂಬ ಭಾವನೆ ನನಗೆ ಅದಾಗಲೇ ಆವರಿಸಿಕೊಂಡುಬಿಟ್ಟಿದೆ . ನೀನಿಲ್ಲದ ನನ್ನ ಮುಂದಿನ ಜೀವನದ ಯಾವ ಕ್ಷಣಗಳು ನನಗೆ ಬೇಡ .ಈ ಬದುಕಿನ ಎಲ್ಲಾ ಹಂತದಲ್ಲೂ ನಿನ್ನನ್ನು ಪ್ರೀತಿಸುತ್ತಿರುತೇನೆ . ಇಂದಿಗೂ ಮುಂದಿಗೂ , ಮುಂದೆಂದಿಗೂ ಯಾರು ಕೊಡಲಾಗದಷ್ಟು ಸಂತೋಷವನ್ನು ಈ ನಿನ್ನ ಮೇಲಿನ ನನ್ನ ಪ್ರೀತಿಯು ನನಗೆ ಕೊಡುತ್ತಿದೆ . ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಿನ್ನ ಕೈಯಲ್ಲೇ ಇದೆ ಗೆಳತೀ . ಈ ಕ್ಷಣಕ್ಕೆ ನಿನ್ನನು ಈ ಪತ್ರದಲ್ಲಿ ಗೆಳತೀ ಎಂದು ಕರೆಯುತ್ತಿದೇನೆ . ಆದರೆ ನಿಜವಾಗಿಯೂ ಹೇಳಬೇಕಂದರೆ ಇಷ್ಟು ಸುಮಧುರವಾದ ಭಾವನೆಯನ್ನು ಕೊಟ್ಟ ನಿನಗೆ ಏನೆಂದು ಹೆಸರಿಡಬೇಕೋ ನನಗೆ ತಿಳಿಯುತ್ತಿಲ್ಲ . ನಿಜವಾದ ಪ್ರೀತಿಯು ಯಾರಿಗೂ ಎಂದಿಗೂ ಮೋಸ ಮಾಡುವುದಿಲ್ಲ . ಪ್ರೀತಿಯೆಂಬುದು ದೇವರ ಹಾಗೆ . ಇನ್ನು ಮುಂದೆ ನಿನ್ನ ಬದುಕಿನ ಎಲ್ಲಾ ಕ್ಷಣಗಳಲ್ಲೂ ನಾನು ನಿನ್ನ ಕೈ ಹಿಡಿದು ಜೊತೆ ಜೊತೆಯಲಿರಲು ಬಯಸುತೇನೆ , ನೀನು ನನ್ನನ್ನು ಒಪ್ಪಿ ಅಪ್ಪಿಕೊಳ್ಳುತ್ತೀಯ ಎಂಬ ನಂಬುಗೆಯಿಂದ.
ನೀನು ನನ್ನ ಬದುಕಿನ ಎಲ್ಲಾ ಕ್ಷಣಗಳಲೂ ಇರಲು ಬಯಸುತಿಯ, ಬೇಗನೆ ತಿಳಿಸು.

               ಇಂತಿ ನಿನ್ನ ಪ್ರೀತಿಯ ಹುಡುಗ .

(ಇದು ಕೇವಲ ಕಾಲ್ಪನಿಕ ಪತ್ರ)



ಭಾನುವಾರ, ಆಗಸ್ಟ್ 1, 2021

ನನ್ನ ಬಗ್ಗೆ

ವೃತಿಯಲ್ಲಿ ಸೀನಿಯರ್ ಹೆಲ್ತ್ co-ordinator .ಮಾತು ತೀರಾ ಕಡಿಮೆ ,ಸಿಕ್ಕಿದನ್ನೆಲ್ಲ ಹಾಳೆಯ ಮೇಲೆ ಗೀಚುವ ಹವ್ಯಾಸ , ತುಂಬಾ ಭಾವುಕ ಜೀವಿ .ಯಾವುದನ್ನಾದರೂ ತೀರಾ ಹಚ್ಚಿಕೊಂಡರೆ ಅದು ಬಿಟ್ಟರು ನಾ  ಬಿಡಲಾರೆ ಪೆನ್ನು , ಪೇಪರ್, ಬುಕ್ಸ್  ಹಾಸ್ಪಿಟಲ್ ಕ್ಯಾಬಿನ್ ನಲ್ಲಿನ  ಕಂಪ್ಯೂಟರ್ ಇವೆ ನನ್ನ ಆಪ್ತಮಿತ್ರರು. ಹೇಳಬೇಕೆಂದುಕೊಂಡಿದ್ದನ್ನು ಅಕ್ಷರಗಳ ಮುಖಾಂತರ ಹೊರ ಹಾಕುವ ಇಂಗಿತ ನನಗೆ. ಓದು ಬರಹ ನನ್ನನ್ನ ಆಕರ್ಷಿಸಿದಷ್ಟು , ಈ ಇಡೀ ಬದುಕಿನಲ್ಲಿ ಯಾವುದು ನನ್ನನ್ನು ಆಕರ್ಷಿಸಿಲ್ಲ. ಇನ್ನು ಮುಂದೆ ನನ್ನ ಬರವಣಿಗೆಯನ್ನು ಶುರುವಿಟ್ಟುಕೊಳ್ಳುತೇನೆ, ನೀವು ಎಲ್ಲರೂ ನನ್ನನ್ನು ತುಂಬು ಹೃದಯದಿಂದ ಪ್ರೋತ್ಸಹಿಸುತಿರ ಎಂಬ ನಂಬುಗೆಯಿಂದ. ಈಗ್ಗೆ ಕೆಲ ವರ್ಷಗಳ ಹಿಂದೆ ನನ್ನನ್ನು ತೀರಾ ಆಕರ್ಷಿಸಿದ್ದು ಪುಸ್ತಕಗಳು ಅದು ಯಾವ ಪರಿ  ನನ್ನನ್ನು ಆವರಿಸಿಕೊಂಡವೆಂದರೆ ನಾನು ಆಫೀಸಿಗೆ ಹೋಗುವುದನ್ನೇ ಮರೆತುಬಿಟ್ಟುರುತಿದ್ದೆ . ನಾನು ತೀರಾ ಒಬ್ಬೊಂಟಿಯಾಗಿದ್ದಾಗ ನನಗೆ ಈ ಪುಸ್ತಕಗಳು ನ್ಯೂಸ್ ಪೇಪರ್ ನಲ್ಲಿ ಬರುವ ಆರ್ಟಿಕಲ್ ಗಳು  ತುಂಬಾ ಹತ್ತಿರವಾದವು ಅಲ್ಲಿಂದ ಶುರುವಾದ ಈ ನನ್ನ ಓದುವ ಹವ್ಯಾಸ ಇಂದಿಗೂ ನಿಂತಿಲ್ಲ . ಎಲ್ಲರ  ಬದುಕಿನಲ್ಲಿಯೂ ಹೇಳಿಕೊಳ್ಳಲಾಗದಂತಹ ,ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಲಾಗದಂತಹ ನೋವುಗಳು ಎಷ್ಟೋ ಇರುತ್ತವೆ. ಈ ಬಾಳ ಪಯಣದಲ್ಲಿ ತೀರಾ ಅನಿರೀಕ್ಷಿತ ಘಟನೆಗಳು ನಡೆದಾಗ ಕೆಲವೊಮ್ಮೆ  ಎಲ್ಲವನ್ನು ಮರೆಯಲು ಸಾಧ್ಯವಾಗದೆ ಈ ಪುಟ್ಟ ಹೃದಯ ಯಾರಿಗೂ ಕಾಣದ ಹಾಗೆ ಒಳಗೊಳಗೇ ಕೊರಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತ ಹೋದಾಗ  ಎಲ್ಲ ಬರಿ ಪ್ರಶ್ನೆಗಳಾಗಿಯೇ ಉಳಿದು ಬಿಟ್ಟಿದ್ದವು.ಕೊನೆಗೆ ನನಗೆ ತಿಳಿದಿದ್ದೇನೆಂದರೆ ಈ ಬದುಕಿನ ಎಲ್ಲ ಪ್ರಶೆಗಳಿಗೂ ಉತ್ತರಗಳನ್ನು ಈ ಪುಸ್ತಕಗಳು ಖಂಡಿತ ಕೊಡುತ್ತವೆ. ನಮ್ಮ ಮೆಡಿಕಲ್ ಬಾಷೆಯಲ್ಲಿ ಹೇಳುವುದಾದರೆ ಸಮಸ್ಯೆಗಳು ವೈರಸ್ ಇದ್ದಹಾಗೆ , ಪುಸ್ತಕಗಳ  ಜ್ಞಾನ ವ್ಯಾಕ್ಸಿನೇಷನ್ ಇದ್ದಹಾಗೆ. ಅದು ಎಂಥಾ ದೊಡ್ಡ ರೋಗ ಬಂದರು ಎದರಿಸುವ ಶಕ್ತಿಯನ್ನು ಕೊಡುತ್ತದೆ. ನನಗೆ ತೀರಾ ನೋವುಂಟುಮಾಡುವ ಸಂಗತಿ ಎಂದರೆ ಈ ಮುಂದುವರಿದ ತಂತ್ರಜ್ಞಾನದಿಂದ ಜನರು ಓದುವ ಹವ್ಯಾಸವನ್ನು ಬಿಟ್ಟಿದ್ದಾರೆ. ನನ್ನ ಬದುಕಿನ ಉದ್ದೇಶವೇನೆಂದರೆ ನನ್ನ ಇಷ್ಟು ವರ್ಷಗಳ ಅನುಭವಗಳನ್ನು ಅಕ್ಷರಗಳ ಮುಖಾಂತರ ನಿಮ್ಮ  ಮುಂದೆ ತೆರೆದಿಡಲು
ಬಯಸುತ್ತೇನೆ ಮತ್ತು ನನ್ನ ಈ ಬರಹಗಳಿಂದ ಕೆಲವೊಂದಿಷ್ಟು ಜನರ ಬದುಕಿನಲ್ಲಿ ಬದಲಾವಣೆಗಳಾದರೆ ಈ ಜೀವ ಮತ್ತೇನನ್ನು ಅಪೇಕ್ಷಿಸುವುದಿಲ್ಲ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಹೊತ್ತಿಗಾಗಲೇ ನನ್ನ ಎರಡು ಪುಸ್ತಕಗಳು ನಿಮ್ಮ ಕೈ ಸೇರುತಿತ್ತು. ಈ ಕೋರೋನ , ಲಾಕ್ ಡೌನ್ ಎಂಬ  ಪೆಡಂಭೂತಗಳು ಯಾರನ್ನು ಬಿಟ್ಟಿಲ್ಲ . ನನ್ನ ಬಗ್ಗೆ ಹೇಳಲು ಮತ್ತೇನು  ಉಳಿದಿಲ್ಲ. ಉಳಿದ್ದಿದರು  ಇನೇನನ್ನು ಹೇಳಲು ಇಚ್ಚಿಸುವುದಿಲ್ಲ. ನನ್ನ ಪ್ರತಿಯೊಂದು ಬರಹಗಳಿಗೂ ನಿಮೆಲ್ಲರ ಅಭಿಪ್ರಾಯಗಳನ್ನು ಎದುರು ನೋಡುತಿರುತ್ತೇನೆ.  ನನ್ನ ಯಾವುದೇ ಬರಹಗಳು ನಿಮಗೆ ಇಷ್ಟವಾದಲ್ಲಿ ದಯಮಾಡಿ ಅದನ್ನು ಬೆಂಬಲಿಸಿ ಪ್ರೋತ್ಸಹಿಸಬೇಕೆಂದು ತುಂಬು ಹೃದಯದಿಂದ ಕೇಳಿಕೊಳ್ಳುತ್ತಿದ್ದೇನೆ . ನಿಮ್ಮ ಪ್ರೋತ್ಸಾಹದ ನುಡಿಗಳೇ ಮುಂದೆ ನಾನು ಬರೆಯುವ ಯಾವ ಪ್ರಕಾರದ ಸಾಹಿತ್ಯಕಾದರು  ಶಕ್ತಿಯನ್ನು ಕೊಡುತ್ತದೆ.


ಪ್ರೀತಿಸಿದವಳನ್ನು ಮರೆಯುವುದು ಹೇಗೆ?

ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ...