ಸೋಮವಾರ, ಆಗಸ್ಟ್ 9, 2021

ಹೆಣ್ಣು...


ಮಗುವಾಗಿ ಹುಟ್ಟಿದ ಕ್ಷಣದಿಂದಲೇ ಶುರುವಾಗುತ್ತದೆ ಈ ಕದನ. ಯಾವ ಮಗು ಹುಟ್ಟುತ್ತದೆ ಗಂಡು ಮಗುವೋ? ಅಥವಾ ಹೆಣ್ಣು ಮಗುವೋ ?. ದೇವರೇ ಮೊದಲನೆಯ ಮಗು ನನಗೆ ಗಂಡಾಗಲಿ ಎಂದು ಪ್ರಾರ್ಥಿಸುವ ಸಾವಿರಾರು ಕೈಗಳು , ಹೆಣ್ಣಾಗದಿರಲಿ ಎಂದು ಪ್ರಾರ್ಥಿಸುವ ಲಕ್ಷಾಂತರ ಕೈಗಳು. ಹುಟ್ಟಿದ ಕ್ಷಣ ಮಾತ್ರದಲ್ಲೇ ಆ ಹೆಣ್ಣು ಮಗು ಯಾರಿಗೂ ಬೇಡವಾಗುತ್ತದೆ. ಈ ಬದುಕು ಎಸೆವ ಸವಾಲುಗಳನ್ನು ಅಂದಿನಿಂದಲೇ ಎದುರಿಸಲು ಸಿದ್ಧವಾಗುತ್ತವೆ. ಒಂದು ಹೆಣ್ಣು ಹುಟ್ಟಿದ ಕ್ಷಣದಿಂದಲೇ ಅದು ಬೇರೆಯವರ ಮನೆಗೆ ಹೋಗುವ ಮಗು ಎಂದು ಆಗಲೇ ನಿರ್ದರಿಸಿಬಿಟ್ಟಿರುತ್ತಾರೆ . ಈ ಹೆಣ್ಣು ಮಕ್ಕಳಿಗೆ ಶಾಪವೆಂದರೆ ಅವರು ಯಾವ ಮನೆಯಲ್ಲಿ ಹುಟ್ಟಿರುತ್ತಾರೋ ಪಾಪ ಆ ಮನೆಯಲ್ಲೇ ಅವರಿಗೆ ಜಾಗ ಇರುವುದಿಲ್ಲ. ಅವರು ಹುಟ್ಟಿದ ಮನೆಯನ್ನು ಮುಂದೊಂದು ದಿನ ಬಿಡಲೇಬೇಕಾಗುತ್ತದೆ. ಈ ಪ್ರಕೃತಿಯಲ್ಲಿ ಸುಂದರವಾಗಿರುವುದೆಲವನ್ನು ಹೆಣ್ಣಿಗೆ ಹೋಲಿಸುತ್ತಾರೆ. ತಂದೆ ತಾಯಿಗೆ ತಕ್ಕ ಮಗಳಾಗಿ ,ಬಂದುವಾಗಿ, ಸ್ನೇಹಿತೆಯಾಗಿ, ಪ್ರೀತಿಯ ಗೆಳೆಯನಿಗೆ ಪ್ರೀತಿಯ ಗೆಳತಿಯಾಗಿ ,ಹೆಂಡತಿಯಾಗಿ ಸೊಸೆಯಾಗಿ, ಮಕ್ಕಳಿಗೆ ಅಮ್ಮನಾಗಿ, ಅತ್ತೆಯಾಗಿ, ಮೊಮೊಕ್ಕಳಿಗೆ ಅಜ್ಜಿಯಾಗಿ,ಸದಾ ಎಲ್ಲರಿಗೂ ಒಳಿತನ್ನು ಬಯಸುವ ಮುಗ್ದ ಮನಸ್ಸಾಗಿ ಬದುಕು ಸವೆದಿರುತ್ತದೆ.
ಪ್ರೀತಿ ,ಕರುಣೆ, ತಾಳ್ಮೆ ,ಸಹನೆ, ನಗು, ಕಣ್ಣೀರು, ನಾಗರ ಹಾವಿನ ಜಡೆ, ಇವೆಲ್ಲದರ ಸಮಾನಾರ್ಥಕ ಪದವೇ ಹೆಣ್ಣು. ಪ್ರತಿಯೊಬ್ಬ ಗಂಡಸಿನ inspiration ,confidence ಎಲ್ಲವೂ ಹೆಣ್ಣು.

ಒಂದು ಹೆಣ್ಣಿನ ಮನಸ್ಸು ಇನ್ನೂ ಮಾತು ಬಾರದ ಪ್ರಶಾಂತವಾದ ಪುಟ್ಟ ಮಗುವಿನ ಹೃದಯವಿದಂತೆ . ಗಂಡು ಹುಟ್ಟಿದರೆ ಹುಟ್ಟಿದ ಮನೆಯನ್ನು ಮಾತ್ರ ಬೆಳಗುತ್ತಾನೆ . ಅದೇ ಒಂದು ಹೆಣ್ಣು ಹುಟ್ಟಿದರೆ, ಹುಟ್ಟಿದ ಮನೆಗೂ ಕೊಟ್ಟ ಮನೆಗೂ , ಎರಡು ಮನೆಯ ಜ್ಯೋತಿಯಾಗಿ ಉರಿಯುತ್ತಾಳೆ. ಅವಳು ಎಲ್ಲೇ ಇದ್ದರು ಹೇಗೆ ಇದ್ದರು ಎಂದಿಗೂ ತನ್ನ ತವರು ಮನೆಯನ್ನು ಮರೆಯುವುದಿಲ್ಲ. ಒಂದು ಹೆಣ್ಣು ನಿಜವಾಗಿಯೂ ಖುಷಿಯಾಗಿದ್ದಾಳೆ ಎಂದರೆ ಅವಳ ತವರು ಮನೆಯು ಸಂತೋಷವಾಗಿದೆ ಎಂದರ್ಥ. ಇದರ ಬೆಲೆ ತಿಳಿಯದೆ, ಹುಟ್ಟಿದಾಗಿನಿಂದಲೇ, ಇನ್ನೊಂದು ಮನೆಯ ಹೆಣ್ಣವಳು ಎಂದು ನಿಂದಿಸುತ್ತಾರೆ ,ನೋಯಿಸುತ್ತಾರೆ . ತುಟಿ ಅಂಚಿನಲ್ಲಿನ ಸಣ್ಣನೆಯ ಮೃದುವಾದ ಮಲ್ಲಿಗೆ ಹೂವಿನ ಪರಿಮಳವ ಬೀರುವ ಸುಂದರವಾದ ನಗುವೊಂದಿದ್ದರೆ ಸಾಕು ಪ್ರಪಂಚವನ್ನೇ ಗೆಲ್ಲುವ ಶಕ್ತಿ ಇರುತ್ತದೆ ಅವಳಿಗೆ. ಯಾರವಳು? ಹೆಣ್ಣಲ್ಲವೇ, ತಾಯಲ್ಲವೇ , ನಮ್ಮ ಬದುಕಿನ ಬೆಳಕಲ್ಲವೇ, ನೋವಲ್ಲವೇ , ನಲಿವಲ್ಲವೇ, ಜೀವನದ ಬಗೆಗೆ ಅರಿತವಳು ಅವಳೇ ಅಲ್ಲವೇ? ಕೊನೆಗೆ ನಮಗೆ ನೆರಳಾಗುವವಳು ಅವಳೇ ಅಲ್ಲವೇ. ಮತ್ತೇಕೆ ಬೇರೆಯವರ ಮನೆಯವಳು ಎಂದು ನಿಂದಿಸುತ್ತೀರಾ ? ಅವಳು ಒಮ್ಮೆ ಆಕಾಶದ ಕಡೆ ಮುಖ ಮಾಡಿ ಸಣ್ಣನೆಯ ಕಿರುನಗೆಯನ್ನು ಮೋಡದೆಡೆಗೆ ಬೀರಿದರೆ ಸಾಕು, ಅದೆಷ್ಟೋ ವರುಷಗಳ ಕಾಲ ಭೂಮಿಯ ಮೇಲೆ ಮುನಿಸಿಕೊಂಡಿದ್ದ ಮೋಡಗಳು ಮಳೆಯಾಗಿ ,ಅವಳ ಸುಂದರವಾದ ಮೊಗವನೊಮ್ಮೆ ನೋಡಲು ಭೂಮಿಗೆ ಬಂದೆ ಬಿಡುತ್ತವೆ. ಹೆಣ್ಣು ಶಕ್ತಿಯೆಲ್ಲವೇ , ಯುಕ್ತಿಯೆಲ್ಲವೇ, ನಮ್ಮ ಬಾಳ ಜ್ಯೋತಿಯನ್ನು ಬೆಳಗುವ ದೀಪವಲ್ಲವೇ. ಹೆಣ್ಣೆಂದರೆ ಹೇಗಿರಬೇಕು? ಸಂಸಾರದ ನೊಗಕ್ಕೆ ಹೆಗಲಾಗಿ, ಕಷ್ಟಗಳನ್ನು ಮೆಟ್ಟಿ ನಿಲ್ಲುವ ದೈರ್ಯಶಾಲಿಯಾಗಿ, ನಾಡಿನ ,ಮನೆಯ ಹೆಮ್ಮೆಯ ಮಗಳಾಗಿರಬೇಕು. ಎಲ್ಲರಿಗೂ ನೋವುಗಳು ಇರುತ್ತವೆ. ಆದರೆ ಅದನ್ನು ತೋರಿಸುವ, ವ್ಯಕ್ತಪಡಿಸುವ ವಿಧಾನಗಳು ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಎಷ್ಟೋ ನೋವುಗಳು ಕಣ್ಣೀರಾಗಿರುತ್ತವೆ. ಆದರೆ ಒಂದು ಹೆಣ್ಣಿನ ನೋವು, ಮೌನವಾಗಿ, ಕಣ್ಣಿನ ನೀರಿನ ಹನಿಗಳನ್ನು ನೆಲಕ್ಕೆ ಚೆಲ್ಲದೆ, ಕಣ್ಣಿನಲ್ಲಿಯೇ ಹಿಡಿದಿಟ್ಟುಕೊಂಡು , ಯಾರಿಗೂ ಕಾಣದ ಹಾಗೆ, ಮರೆಯಲ್ಲಿ ನಿಂತು ಮೆಲ್ಲಗೆ ಕಣ್ಣೀರಾಗಿ, ಗೊತ್ತಿಲ್ಲದವರ ಮುಂದೆ ನಗುವಾಗಿರುತ್ತಾಳೆ.

ಹೆಣ್ಣು ಮಗುವಿನ ಜನನವೆಂದರೆ, ಮಗುವಿನ ತಂದೆ ಮುಖವನ್ನು ಗಂಟುಹಾಕಿಕೊಳ್ಳುವ ಕಾಲವೊಂದಿತ್ತು. ಆದರೆ ಮೂರ್ಖ ತಂದೆಗೆ ಗೊತ್ತಿರುವುದಿಲ್ಲ ಪ್ರತಿಯೊಬ್ಬ ತಂದೆಗೂ ಆಸರೆಯಾಗಿರುವುದು ತನ್ನ ಮಗಳೇ ಎಂದು. ಒಂದು ಕಾಲದಲ್ಲಿ ಪುರುಷರಿಗಷ್ಟೇ ಸೀಮಿತವಾಗಿದ್ದ ಅದೆಷ್ಟೋ ವ್ಯವಹಾರಗಳನ್ನು ಇಂದು ಹೆಣ್ಣು ಸುಲಲಿತವಾಗಿ ನಡೆಸಿಕೊಂಡು ಹೋಗುತ್ತಾಳೆ. ಈ ಆಧುನಿಕ ಸಮಾಜದ ಕೆಲವೊಂದು ಕಡೆ ಗಂಡು ,ಹೆಣ್ಣು ಎಂಬ ಕೆಲವು ಭೇದಗಳನ್ನು ತೊಡೆದು ಹಾಕಿರುವುದನ್ನು ಗಮನಿಸಬಹುದು. ಆದರೆ ಇನ್ನೂ ಕೆಲವೆಡೆ ಗಂಡು ,ಹೆಣ್ಣು ಎಂಬ ಭೇದ ಭಾವವು ಈಗಲೂ ಇರುವುದನ್ನು ಕಾಣಬಹುದು. ಒಂದು ಹೆಣ್ಣು ಕೋಪದಿಂದ ಕಣ್ಣು ಬಿಟ್ಟರೆ ಪ್ರಳಯವಾದರೂ ಆಗಬಹುದು . ಅದೇ ಹೆಣ್ಣು ಪ್ರೀತಿಯಿಂದ ಕಣ್ಣು ಬಿಟ್ಟರೆ ಒಡೆದು ಚೂರು ಚೂರಾಗಿದ್ದ ಹೃದಯವೂ ಕೂಡ ತನ್ನ ಎದೆ ಬಡಿತವನ್ನು  ಮುಂದುವರಿಸುವ ಶಕ್ತಿ ಅದಕ್ಕಿರುತ್ತದೆ. ಎಂತಹ ಕ್ರೂರಿಯ ಮನಸಿನಲ್ಲಿಯೂ ಪ್ರೀತಿಯನ್ನು ಹುಟ್ಟಿಸುವ ಶಕ್ತಿ ಹೆಣ್ಣಿಗಲ್ಲದೆ ಮತ್ಯಾರಿಗಿರುತ್ತದೆ.

ಅವಳೆಂದರೆ ಏನ್ನೇನಲಿ, ಅವಳೇ ಒಂದು ಶಕ್ತಿ . ಅವಳೇ ಆ ಹೆಣ್ಣು.....................

ಪ್ರೀತಿಸಿದವಳನ್ನು ಮರೆಯುವುದು ಹೇಗೆ?

ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ...