ಭಾನುವಾರ, ಆಗಸ್ಟ್ 1, 2021

ನನ್ನ ಬಗ್ಗೆ

ವೃತಿಯಲ್ಲಿ ಸೀನಿಯರ್ ಹೆಲ್ತ್ co-ordinator .ಮಾತು ತೀರಾ ಕಡಿಮೆ ,ಸಿಕ್ಕಿದನ್ನೆಲ್ಲ ಹಾಳೆಯ ಮೇಲೆ ಗೀಚುವ ಹವ್ಯಾಸ , ತುಂಬಾ ಭಾವುಕ ಜೀವಿ .ಯಾವುದನ್ನಾದರೂ ತೀರಾ ಹಚ್ಚಿಕೊಂಡರೆ ಅದು ಬಿಟ್ಟರು ನಾ  ಬಿಡಲಾರೆ ಪೆನ್ನು , ಪೇಪರ್, ಬುಕ್ಸ್  ಹಾಸ್ಪಿಟಲ್ ಕ್ಯಾಬಿನ್ ನಲ್ಲಿನ  ಕಂಪ್ಯೂಟರ್ ಇವೆ ನನ್ನ ಆಪ್ತಮಿತ್ರರು. ಹೇಳಬೇಕೆಂದುಕೊಂಡಿದ್ದನ್ನು ಅಕ್ಷರಗಳ ಮುಖಾಂತರ ಹೊರ ಹಾಕುವ ಇಂಗಿತ ನನಗೆ. ಓದು ಬರಹ ನನ್ನನ್ನ ಆಕರ್ಷಿಸಿದಷ್ಟು , ಈ ಇಡೀ ಬದುಕಿನಲ್ಲಿ ಯಾವುದು ನನ್ನನ್ನು ಆಕರ್ಷಿಸಿಲ್ಲ. ಇನ್ನು ಮುಂದೆ ನನ್ನ ಬರವಣಿಗೆಯನ್ನು ಶುರುವಿಟ್ಟುಕೊಳ್ಳುತೇನೆ, ನೀವು ಎಲ್ಲರೂ ನನ್ನನ್ನು ತುಂಬು ಹೃದಯದಿಂದ ಪ್ರೋತ್ಸಹಿಸುತಿರ ಎಂಬ ನಂಬುಗೆಯಿಂದ. ಈಗ್ಗೆ ಕೆಲ ವರ್ಷಗಳ ಹಿಂದೆ ನನ್ನನ್ನು ತೀರಾ ಆಕರ್ಷಿಸಿದ್ದು ಪುಸ್ತಕಗಳು ಅದು ಯಾವ ಪರಿ  ನನ್ನನ್ನು ಆವರಿಸಿಕೊಂಡವೆಂದರೆ ನಾನು ಆಫೀಸಿಗೆ ಹೋಗುವುದನ್ನೇ ಮರೆತುಬಿಟ್ಟುರುತಿದ್ದೆ . ನಾನು ತೀರಾ ಒಬ್ಬೊಂಟಿಯಾಗಿದ್ದಾಗ ನನಗೆ ಈ ಪುಸ್ತಕಗಳು ನ್ಯೂಸ್ ಪೇಪರ್ ನಲ್ಲಿ ಬರುವ ಆರ್ಟಿಕಲ್ ಗಳು  ತುಂಬಾ ಹತ್ತಿರವಾದವು ಅಲ್ಲಿಂದ ಶುರುವಾದ ಈ ನನ್ನ ಓದುವ ಹವ್ಯಾಸ ಇಂದಿಗೂ ನಿಂತಿಲ್ಲ . ಎಲ್ಲರ  ಬದುಕಿನಲ್ಲಿಯೂ ಹೇಳಿಕೊಳ್ಳಲಾಗದಂತಹ ,ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಲಾಗದಂತಹ ನೋವುಗಳು ಎಷ್ಟೋ ಇರುತ್ತವೆ. ಈ ಬಾಳ ಪಯಣದಲ್ಲಿ ತೀರಾ ಅನಿರೀಕ್ಷಿತ ಘಟನೆಗಳು ನಡೆದಾಗ ಕೆಲವೊಮ್ಮೆ  ಎಲ್ಲವನ್ನು ಮರೆಯಲು ಸಾಧ್ಯವಾಗದೆ ಈ ಪುಟ್ಟ ಹೃದಯ ಯಾರಿಗೂ ಕಾಣದ ಹಾಗೆ ಒಳಗೊಳಗೇ ಕೊರಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತ ಹೋದಾಗ  ಎಲ್ಲ ಬರಿ ಪ್ರಶ್ನೆಗಳಾಗಿಯೇ ಉಳಿದು ಬಿಟ್ಟಿದ್ದವು.ಕೊನೆಗೆ ನನಗೆ ತಿಳಿದಿದ್ದೇನೆಂದರೆ ಈ ಬದುಕಿನ ಎಲ್ಲ ಪ್ರಶೆಗಳಿಗೂ ಉತ್ತರಗಳನ್ನು ಈ ಪುಸ್ತಕಗಳು ಖಂಡಿತ ಕೊಡುತ್ತವೆ. ನಮ್ಮ ಮೆಡಿಕಲ್ ಬಾಷೆಯಲ್ಲಿ ಹೇಳುವುದಾದರೆ ಸಮಸ್ಯೆಗಳು ವೈರಸ್ ಇದ್ದಹಾಗೆ , ಪುಸ್ತಕಗಳ  ಜ್ಞಾನ ವ್ಯಾಕ್ಸಿನೇಷನ್ ಇದ್ದಹಾಗೆ. ಅದು ಎಂಥಾ ದೊಡ್ಡ ರೋಗ ಬಂದರು ಎದರಿಸುವ ಶಕ್ತಿಯನ್ನು ಕೊಡುತ್ತದೆ. ನನಗೆ ತೀರಾ ನೋವುಂಟುಮಾಡುವ ಸಂಗತಿ ಎಂದರೆ ಈ ಮುಂದುವರಿದ ತಂತ್ರಜ್ಞಾನದಿಂದ ಜನರು ಓದುವ ಹವ್ಯಾಸವನ್ನು ಬಿಟ್ಟಿದ್ದಾರೆ. ನನ್ನ ಬದುಕಿನ ಉದ್ದೇಶವೇನೆಂದರೆ ನನ್ನ ಇಷ್ಟು ವರ್ಷಗಳ ಅನುಭವಗಳನ್ನು ಅಕ್ಷರಗಳ ಮುಖಾಂತರ ನಿಮ್ಮ  ಮುಂದೆ ತೆರೆದಿಡಲು
ಬಯಸುತ್ತೇನೆ ಮತ್ತು ನನ್ನ ಈ ಬರಹಗಳಿಂದ ಕೆಲವೊಂದಿಷ್ಟು ಜನರ ಬದುಕಿನಲ್ಲಿ ಬದಲಾವಣೆಗಳಾದರೆ ಈ ಜೀವ ಮತ್ತೇನನ್ನು ಅಪೇಕ್ಷಿಸುವುದಿಲ್ಲ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಹೊತ್ತಿಗಾಗಲೇ ನನ್ನ ಎರಡು ಪುಸ್ತಕಗಳು ನಿಮ್ಮ ಕೈ ಸೇರುತಿತ್ತು. ಈ ಕೋರೋನ , ಲಾಕ್ ಡೌನ್ ಎಂಬ  ಪೆಡಂಭೂತಗಳು ಯಾರನ್ನು ಬಿಟ್ಟಿಲ್ಲ . ನನ್ನ ಬಗ್ಗೆ ಹೇಳಲು ಮತ್ತೇನು  ಉಳಿದಿಲ್ಲ. ಉಳಿದ್ದಿದರು  ಇನೇನನ್ನು ಹೇಳಲು ಇಚ್ಚಿಸುವುದಿಲ್ಲ. ನನ್ನ ಪ್ರತಿಯೊಂದು ಬರಹಗಳಿಗೂ ನಿಮೆಲ್ಲರ ಅಭಿಪ್ರಾಯಗಳನ್ನು ಎದುರು ನೋಡುತಿರುತ್ತೇನೆ.  ನನ್ನ ಯಾವುದೇ ಬರಹಗಳು ನಿಮಗೆ ಇಷ್ಟವಾದಲ್ಲಿ ದಯಮಾಡಿ ಅದನ್ನು ಬೆಂಬಲಿಸಿ ಪ್ರೋತ್ಸಹಿಸಬೇಕೆಂದು ತುಂಬು ಹೃದಯದಿಂದ ಕೇಳಿಕೊಳ್ಳುತ್ತಿದ್ದೇನೆ . ನಿಮ್ಮ ಪ್ರೋತ್ಸಾಹದ ನುಡಿಗಳೇ ಮುಂದೆ ನಾನು ಬರೆಯುವ ಯಾವ ಪ್ರಕಾರದ ಸಾಹಿತ್ಯಕಾದರು  ಶಕ್ತಿಯನ್ನು ಕೊಡುತ್ತದೆ.


ಪ್ರೀತಿಸಿದವಳನ್ನು ಮರೆಯುವುದು ಹೇಗೆ?

ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ...