ಮಂಗಳವಾರ, ಆಗಸ್ಟ್ 3, 2021

ಕಾರಣವಿಲ್ಲದ ಬದುಕು...

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>
" ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ", ಎಲ್ಲೋ ಕೇಳಿದ ಸಾಲುಗಳು ಪದೇ ಪದೇ ನೆನಪಾಗುತ್ತವೆ. ಕಳೆದುಹೋದ ದಿನಗಳಲ್ಲಿ ನನಸಾಗದ ಕನಸುಗಳನ್ನು ನೆನೆಯುತ್ತ ಸಮಯ ಕಳೆಯುವುದೇ ಬದುಕಾ ?. ಮುಂದೆ ಬರಲಿರುವ ದಿನಗಳನ್ನು ಬರಲಿ ಎಂದು ಕಾಯುತ್ತ ಕೂರುವುದೇ ಬದುಕಾ ?. ಇಲ್ಲಾ ಎಲ್ಲವನ್ನು ಮರೆತು ? ಮರೆಯಲಾಗದಿದ್ದಾಗ , ಮರೆತಂತೆ ನಟಿಸಿ ,ಮುಖದ ಮೇಲೆ ಒಂದು ಸಣ್ಣನೆಯ ಕಿರುನಗೆಯನ್ನು ಇಟ್ಟುಕೊಂಡು ,ಎಲ್ಲ ಮರೆತ್ತಿದ್ದೇನೆ ಎಂದು ಇರುವುದೇ ಬದುಕಾ?. ಈ ಬದುಕಿಗೆ ಯಾವ ಕಾರಣಗಳು ಇಲ್ಲ. ಕಾರಣಗಳು ಇದ್ದರು ಯಾವುದು ಶಾಶ್ವತವಲ್ಲ . "ಎಲ್ಲಿಯವರೆಗೆ ? ಈ ಹೃದಯದ ಬಡಿತ ನಿಲ್ಲುವವರೆಗೆ ". ಯಾರನ್ನಾದರೂ ಒಮ್ಮೆ ಕೇಳಿ ನೋಡಿರಿ "ಚೆನ್ನಾಗಿದ್ದೀರ"ಎಂದು. ಸುಖವಾಗಿದೀನಿ , ತುಂಬಾ ಸಂತೋಷವಾಗಿದೀನಿ ಎಂಬಿತ್ಯಾದಿ ಪದಗಳು ಯಾರ dictionary ಯಲ್ಲಿಯೂ ಇರುವುದಿಲ್ಲ. ಮನುಷ್ಯ ಎಂಬ ಪ್ರಾಣಿಗೆ ಯಾವುದರಲ್ಲೂ ಸುಖವಿರುವುದಿಲ್ಲ , ಎಲ್ಲವೂ ಸಿಕ್ಕ ಮೇಲೂ ಇನ್ನೂ ಏನೋ ಬೇಕು ಎಂದು ಮನಸ್ಸು, ದೇಹಗಳೆರಡೂ ಒಟ್ಟಿಗೆ meeting ಮಾಡಿ ನಿರ್ಧಾರಕ್ಕೆ ಬಂದು ಬಿಟ್ಟಿರುತ್ತವೆ. ಯಾರ ಬದುಕಿಗು ನಿರ್ದಿಷ್ಟ ಕಾರಣವಿರುವುದಿಲ್ಲ. ಎಲ್ಲರ ಬದುಕಿನಲ್ಲಿಯೂ ಮುಂದೆ ಏನು ? ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದು ಕಣ್ಣ ಮುಚ್ಚಿದೊಡನೆ ಕಣ್ಣ ಮುಂದೆ ಬಂದು ರಾತ್ರಿಯೆಲ್ಲಾ ಜಾಗರಣೆ ಮಾಡಿಸುತ್ತದೆ.

ಪಡೆದುಕೊಂಡವರು ಅಂಥ ಯಾರು ಇಲ್ಲ. ಒಂದು ರೀತಿಯಲ್ಲಿ ಎಲ್ಲರು ಕಳೆದುಕೊಂಡವರೇ . ಕಳೆದುಕೊಂಡ ಪ್ರೀತಿ , ಸ್ನೇಹ, ಬಾಲ್ಯ ,ದುಡ್ಡು,ಸಂಬಂಧ ,ಕೈ, ಕಾಲು , ಕಿಡ್ನಿ , ಮರೆತೇನೆಂದರು ಮತ್ತೆ ನೆನಪಾಗುವ ಹಳೆಯ ಸುಮಧುರವಾದ ಕ್ಷಣಗಳು, ಕಳೆದುಹೋದ ಮನಸು.

ನಾವು ಕಳೆದುಕೊಂಡವರು , ಬದುಕಿಗೆ ಕಾರಣ ಹುಡುಕುತ್ತಿರುವವರು. ಕಾರಣ ಸಿಕ್ಕವರಷ್ಟೇ ಅದೃಷ್ಟವಂತರು . ಇಲ್ಲದಿದ್ದರೆ ನಡು ರಸ್ತೆಯಲ್ಲಿ  ,ಉರಿ ಬಿಸಿಲಿನಲ್ಲಿ, BMTC ಬಸ್ಸಿನಲ್ಲಿ , ಕೂರಲು ಸೀಟೂ ಇಲ್ಲದೆ , ಅದೆಷ್ಟೋ ಸೆಕೆಂಡುಗಳ , ಟ್ರಾಫಿಕ್ ಜಾಮಿನಲ್ಲಿ ಸಿಕ್ಕಂತಾಗುತ್ತದೆ ನಮ್ಮ ಈ ಬದುಕು. ಬಸ್ಸಿನಿಂದ ಇಳಿಯುವ ಹಾಗು ಇಲ್ಲ .ಅದರೊಳಗೆ ನಿಲ್ಲುವ ಹಾಗು ಇಲ್ಲ. ಬೇರೆ ದಾರಿ ಕಾಣದೆ , ಇಷ್ಟವಿಲ್ಲದಿದ್ದರು ಅನಿವಾರ್ಯೆತೆಗೆ  ನಿಲ್ಲಲೇಬೇಕಾಗುತ್ತದೆ.
ಬದುಕಿಗೊಂದು ಅರ್ಥ ಹುಡುಕೋಣ , ಅರ್ಥಕೊಂದು ಉದ್ದೇಶ , ಉದ್ದೇಶದೆಡೆಗೆ ಮುಂದಿನ ಎಲ್ಲಾ ಹೆಜ್ಜೆಗಳನ್ನುಇಟ್ಟರಷ್ಟೇ ಬದುಕು.

ಕಾರಣವಿಲ್ಲದ ಬದುಕಿನೆಡೆಗೆ ಕಾರಣ ಹುಡುಕ ಹೊರಟ ಬದುಕೇ ನಿಜವಾದ ಬದುಕು.

ಪ್ರೀತಿಸಿದವಳನ್ನು ಮರೆಯುವುದು ಹೇಗೆ?

ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ...